ಭೋಪಾಲ್: ರಾಜ್ಯದ ಅಭಿವೃದ್ದಿಗೆ ಬಂಡವಾಳ ಆಕರ್ಷಿಸಲು ಸ್ವಿಟ್ಜರ್ಲೆಂಡ್ಗೆ ತೆರಳಿದ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ಅವರು ಸರ್ಕಾರದ ಖಜಾನೆಗೆ ಆರ್ಥಿಕವಾಗಿ ಹೊರೆಯಾಗಿದ್ದಾರೆ.
ಈ ಪ್ರವಾಸದ ವೇಳೆ,ವಿಮಾನ ಟಿಕೆಟ್‌ಗೆ ₹ 30 ಲಕ್ಷ, ಹೊಟೇಲ್ ಬಿಲ್‌ಗೆ ₹ 45 ಲಕ್ಷ, ವಿಮಾನ ನಿಲ್ದಾಣದಲ್ಲಿ ವಿಐಪಿ ಲಾಂಜ್‌ಗೆ ₹ 2 ಲಕ್ಷ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳಿಗೆ ಸಿಎಂ ಮತ್ತು ಅಧಿಕಾರಿಗಳ ತಂಡ ಧಾರಾಳವಾಗಿ ವೆಚ್ಚ ಮಾಡಿರುವುದಕ್ಕೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಸ್ವಿಟ್ಜರ್ಲೆಂಡ್‌ನಲ್ಲಿ 2019ರ ಜನವರಿಯಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಳ್ಳಲು ಸಿಎಂ ಜೊತೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಆರ್. ಮೋಹಂತಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅಶೋಕ್ ಬಾರ್ನ್ವಾಲ್ ಹಾಗೂ ಕೈಗಾರಿಕಾ ಇಲಾಖೆಯ ಹೂಡಿಕೆ ಪ್ರಚಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸುಲೇಮಾನ್ ತೆರಳಿದ್ದರು.