ETV Bharat / bharat

ಗುಡ್ಡಗಾಡು ಯುದ್ಧಕ್ಕೂ ಸೈ ಭಾರತೀಯ ಸೈನಿಕರು! - ಸಿಯಾಚಿನ್ ಗ್ಲೇಸಿಯರ್

ಗುಡ್ಡಗಾಡು ಯುದ್ಧದಲ್ಲಿ ಭಾರತ ಪ್ರಾಚೀನ ಕಾಲದಿಂದಲೂ ಮುಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಭಾರತದ ರೆಡ್ ಈಗಲ್ ಡಿವಿಜನ್ (ಈಗ 4 ಇನ್ಫೆಂಟ್ರಿ ಡಿವಿಜನ್ ಎಂದು ಹೆಸರಿಸಲಾಗಿದೆ) 1941 ರಲ್ಲಿ ಎರಿಟ್ರೀ ಗುಡ್ಡಗಳಲ್ಲಿ ಶೌರ್ಯ ಮರೆದಿತ್ತು. ಈ ಕಾಳಗದಲ್ಲಿ ಸಾಕಷ್ಟು ವೀರರನ್ನು ಹೊಂದಿದ್ದ ಇಟಲಿ ಪಡೆಗಳನ್ನು ರೆಡ್ ಈಗಲ್ ಡಿವಿಜನ್ ಸೋಲಿಸಿತ್ತು.

MOUNTAIN WARFARE -
MOUNTAIN WARFARE -
author img

By

Published : Jun 24, 2020, 5:42 PM IST

ಲಡಾಖ್​ನ ಗಾಲ್ವನ್ ವ್ಯಾಲಿಯಲ್ಲಿ ಭಾರತ ಹಾಗೂ ಚೀನಾ ಸೇನಾಪಡೆ ಯೋಧರ ನಡುವಿನ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ನಂತರ ಗುಡ್ಡಗಾಡು ಯುದ್ಧ ಅಥವಾ ಅತಿ ಎತ್ತರದ ಪ್ರದೇಶಗಳಲ್ಲಿ ಯುದ್ಧ ಮಾಡುವ ವಿಷಯ ಈಗ ಚರ್ಚೆಯ ವಿಷಯವಾಗಿದೆ. ಗುಡ್ಡಗಾಡಿನಲ್ಲಿ ಹಾಗೂ ಅತಿ ಎತ್ತರದ ಪರ್ವತಗಳ ತುದಿಯಲ್ಲಿ ನಿಂತು ಶತ್ರುವಿನೊಂದಿಗೆ ಬಡಿದಾಡಲು ವಿಶೇಷ ಯುದ್ಧ ಕೌಶಲ್ಯ ಹಾಗೂ ಸಾಮರ್ಥ್ಯ ಎರಡೂ ಬೇಕಾಗುತ್ತವೆ.

ಗುಡ್ಡಗಾಡು ಯುದ್ಧದಲ್ಲಿ ಭಾರತ ಪ್ರಾಚೀನ ಕಾಲದಿಂದಲೂ ಮುಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಭಾರತದ ರೆಡ್ ಈಗಲ್ ಡಿವಿಜನ್ (ಈಗ 4 ಇನ್ಫೆಂಟ್ರಿ ಡಿವಿಜನ್ ಎಂದು ಹೆಸರಿಸಲಾಗಿದೆ) 1941 ರಲ್ಲಿ ಎರಿಟ್ರೀ ಗುಡ್ಡಗಳಲ್ಲಿ ಶೌರ್ಯ ಮರೆದಿತ್ತು. ಈ ಕಾಳಗದಲ್ಲಿ ಸಾಕಷ್ಟು ವೀರರನ್ನು ಹೊಂದಿದ್ದ ಇಟಲಿ ಪಡೆಗಳನ್ನು ರೆಡ್ ಈಗಲ್ ಡಿವಿಜನ್ ಸೋಲಿಸಿತ್ತು.

ಗುಡ್ಡಗಾಡು ಕಾಳಗದಲ್ಲಿ ಭಾರತದ ಪ್ರಮುಖ ವಿಜಯಗಳು

- 1967 ರಲ್ಲಿ ನಾಥು ಲಾ ಹಾಗೂ ಚೋ ಲಾ ಗಳಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆ ಚೀನಾ ಸೇನಾಪಡೆಗೆ ಭಾರಿ ಹಾನಿ ಮಾಡಿತ್ತು.

- 1987 ರ ಸಮ್ದೋರಿಂಗ್ ಚು ಘಟನೆ.

- ಸಿಯಾಚಿನ್ ಗ್ಲೇಸಿಯರ್: ಸಮುದ್ರ ಮಟ್ಟದಿಂದ ಸುಮಾರು 6700 ಮೀಟರ್ ಎತ್ತರದಲ್ಲಿರುವ ಸಿಯಾಚಿನ್ ಗ್ಲೇಸಿಯರ್ ವಿಶ್ವದ ಅತಿ ಎತ್ತರ ಪ್ರದೇಶದ ಯುದ್ಧಭೂಮಿಯಾಗಿದೆ. ಇಂಥಲ್ಲಿ ನೂರಾರು ಔಟ್​ಪೋಸ್ಟ್​ಗಳನ್ನು ನಿರ್ಮಿಸಿರುವ ಭಾರತೀಯ ಸೇನೆ ಆರರಿಂದ ಏಳು ಸಾವಿರ ಸೈನಿಕರನ್ನು ನಿರಂತರವಾಗಿ ನಿಯೋಜಿಸಿದೆ.

- ಆಪರೇಶನ್ ರಾಜೀವ: 1987 ರಲ್ಲಿ ಪಾಕಿಸ್ತಾನ ಸೈನಿಕರು ಭಾರತದ ಗಡಿಯ ಅತಿ ಎತ್ತರದ ಬಿಲಾಫೊಂಡ್ ಲಾ ಎದುರಿನ ಪರ್ವತವನ್ನು ಆಕ್ರಮಿಸಿಕೊಂಡಿದ್ದರು. ಭಾರತೀಯ ಸೈನಿಕರು ಈ ಮಂಜಿನ ಗುಡ್ಡವನ್ನು ಹತ್ತಿ ಪಾಕ್​ ಸೈನಿಕರನ್ನು ಕೊಂದು ಪರ್ವತವನ್ನು ಮರಳಿ ಸ್ವಾಧೀನಕ್ಕೆ ಪಡೆದಿದ್ದರು. ಈ ಪರ್ವತಕ್ಕೆ ಬನಾ ಪೋಸ್ಟ್ ಎಂದು ಮರುನಾಮಕರಣ ಮಾಡಲಾಗಿತ್ತು. ಈ ಯುದ್ಧದಲ್ಲಿ ಅಪ್ರತಿಮ ಶೌರ್ಯ ತೋರಿದ್ದ ಬನಾ ಸಿಂಗ್ ಅವರಿಗೆ ಪರಮ ವೀರ್ ಚಕ್ರ ನೀಡಲಾಯಿತು.

- ಕಾರ್ಗಿಲ್ ಯುದ್ಧ 1999: ದ್ರಾಸ್ ಪ್ರದೇಶದ ಕಾರ್ಗಿಲ್ ಗುಡ್ಡಗಳನ್ನು ಆಕ್ರಮಿಸಿಕೊಂಡಿದ್ದ ಪಾಕಿಸ್ತಾನಿ ಸೈನಿಕರನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿದ್ದು ಈಗ ಇತಿಹಾಸ.

ಗುಡ್ಡಗಾಡು ಯುದ್ಧತಂತ್ರ ಕಲಿಸುವ ಮಿಲಿಟರಿ ತರಬೇತಿ ಕೇಂದ್ರಗಳು

- ಜಮ್ಮು ಕಾಶ್ಮೀರ ರಾಜ್ಯದ ಗುಲ್​ಮಾರ್ಗ್​ನಲ್ಲಿರುವ ಹೈ ಅಲ್ಟಿಟ್ಯೂಡ್ ಮೌಂಟನ್ ವಾರ್​ಫೇರ್ ಜಗತ್ತಿನ ಅತಿ ಶ್ರೇಷ್ಠ ಗುಡ್ಡಗಾಡು ಯುದ್ಧ ತರಬೇತಿ ಕೇಂದ್ರವಾಗಿದೆ.

- ಕಾರ್ಗಿಲ್ ಯುದ್ಧ ತರಬೇತಿ ಕೇಂದ್ರ: ಜಮ್ಮು ಕಾಶ್ಮೀರದ ದ್ರಾಸ್ ವಲಯದಲ್ಲಿ ಭಾರತೀಯ ಸೇನೆಯು ಕಾರ್ಗಿಲ್ ಬ್ಯಾಟಲ್ ಸ್ಕೂಲ್ ಸ್ಥಾಪಿಸಿದೆ. ಇಲ್ಲಿ ಸೈನಿಕರಿಗೆ ಅತಿ ಎತ್ತರ ಪ್ರದೇಶಗಳಲ್ಲಿ ಯುದ್ಧ ಮಾಡುವ ಕಲೆಯನ್ನು ಕಲಿಸಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.