ETV Bharat / bharat

ಕೊರೊನಾ ಗೆದ್ದು ಬಂದ ಮಗಳಿಗೆ ಆರತಿ ಬೆಳಗಿ ಮನೆಯೊಳಗೆ ಬರಮಾಡಿಕೊಂಡ ತಾಯಿ

ಕೊರೊನಾ ಸೋಂಕಿಗೊಳಗಾಗಿದ್ದ ಯುವತಿ 23 ದಿನಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಕಳೆದಿದ್ದಾಳೆ. ಸೋಂಕಿನ ವಿರುದ್ಧ ಹೋರಾಡಿ ಆಸ್ಪತ್ರೆಯಿಂದ ನಿನ್ನೆಯಷ್ಟೇ ಡಿಸ್ಚಾರ್ಜ್​​ ಆಗಿದ್ದಳು.

Mother welcomed her corona virus recoverd daughter

author img

By

Published : Apr 11, 2020, 11:40 AM IST

ಮೊರಾದಾಬಾದ್ ​(ಉತ್ತರ ಪ್ರದೇಶ): ಉತ್ತರಪ್ರದೇಶದ ಮೊರದಾಬಾದ್​ನಲ್ಲಿ ಯುವತಿಯೋರ್ವಳು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖವಾಗಿ ಮನೆಗೆ ಮರಳಿದ್ದಾಳೆ.

ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಈಕೆ ಮಾರಕ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿ ಮನೆಯ ಹೊಸ್ತಿಲು ತುಳಿಯುತ್ತಿದ್ದಂತೆ ತಾಯಿ ಆರತಿ ಮಾಡಿ ಮನೆಯೊಳಗೆ ಬರಮಾಡಿಕೊಂಡರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕೊರೊನಾ ಸೋಂಕಿಗೊಳಗಾಗಿದ್ದ ಯುವತಿ 23 ದಿನಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಕಳೆದಿದ್ದಾಳೆ. ಸೋಂಕಿತ ವಿರುದ್ಧ ಹೋರಾಡಿ ಆಸ್ಪತ್ರೆಯಿಂದ ನಿನ್ನೆಯಷ್ಟೇ ಡಿಸ್ಚಾರ್ಜ್​​ ಆಗಿದ್ದಳು.

ಮಗಳು ಕೊರೊನಾ ವಿರುದ್ಧ ಸೆಣಸಾಟ ನಡೆಸಿ ಗೆದ್ದಿದ್ದಾಳೆ. ಪ್ರಧಾನಿ, ಮುಖ್ಯಮಂತ್ರಿ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ಎಂದು ತಾಯಿ ಖುಷಿ ಹಂಚಿಕೊಂಡರು.

ಉತ್ತರಪ್ರದೇಶದಲ್ಲಿ 430ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಕೆಲವರು ಗುಣಮುಖರಾಗಿ ಮನೆ ಸೇರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.