ಕಡಪಾ( ಆಂಧ್ರಪ್ರದೇಶ): ಚಿಕ್ಕ ವಯಸ್ಸಿನಲ್ಲಿ ತಾಯಿಯಿಂದ ದೂರವಾದ ಪಾಕಿಸ್ತಾನಿ ಯುವಕನೊಬ್ಬ ರಾಜ್ಯದ ಕಡಪ ಜಿಲ್ಲೆಯ ರೈಲ್ವೆ ಕೋಡೂರಿನಲ್ಲಿರುವ ತನ್ನ ಅಮ್ಮನನ್ನು ಬಹುದಿನಗಳ ಬಳಿಕ ಭೇಟಿಯಾಗಿದ್ದಾನೆ .
ಹೀಗೆ ಭೇಟಿಯಾದ ಮಗನ ಹೆಸರು ವಾಲಿದ್.. ಆತನ ತಾಯಿಯೇ ಶೇಕ್ ನೂರ್. ಈ ಇಬ್ಬರು ಹಲವು ವರ್ಷಗಳ ಬಳಿಕ ಭೇಟಿಯಾಗಿದ್ದಾರೆ. ಅಂದ ಹಾಗೆ ಶೇಖ್ ನೂರ್ ಪಾಕಿಸ್ತಾನದ ವ್ಯಕ್ತಿಯೊಬ್ಬರನ್ನು ಮದುವೆ ಆಗಿದ್ದರು. ಚಿಕ್ಕ ವಯಸ್ಸಿನಲ್ಲಿ ವಾಲಿದ್ನನ್ನು ಭಾರತಕ್ಕೆ ಕೂಡ ಕರೆ ತಂದಿದ್ದರಂತೆ. ಬಳಿಕ ಕೆಲ ವೈಯಕ್ತಿಕ ಕಾರಣಗಳಿಂದ ದಂಪತಿ ಬೇರೆ ಬೇರೆಯಾಗಿದ್ದರು. ಆ ಬಳಿಕ ವಾಲಿದ್ ತನ್ನ ತಂದೆಯೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದರು. ಇನ್ನು ತಾಯಿ ಶೇಖ್ ನೂರು ಭಾರತಕ್ಕೆ ಹಿಂದಿರುಗಿದ್ದರು. ಅಂದಿನಿಂದ ತಾಯಿ ನೆನಪಲ್ಲೇ ಕಾಲ ಕಳೆದ ಮಗ ವಾಲಿದ್ ತಾಯಿಯನ್ನು ನೋಡಲು ಕಾತರರಾಗಿದ್ದರು.
ಕೊನೆಗೆ ತಾಯಿಯನ್ನು ಪತ್ತೆ ಹಚ್ಚಿದ ಮಗ ವಾಲಿದ್ 45 ದಿನಗಳ ವೀಸಾದ ಮೇಲೆ ಭಾರತಕ್ಕೆ ಬಂದಿದ್ದು, ಹೆತ್ತಮ್ಮನನ್ನು ಭೇಟಿ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಬಹು ದಿನಗಳ ಬಳಿಕ ತಾಯಿಯನ್ನ ಆಲಂಗಿಸಿಕೊಂಡು ಆನಂದ ಬಾಷ್ಪವನ್ನೇ ಹರಿಸಿದ್ದಾನೆ. ಈ ನಡುವೆ ಬಹಳ ವರ್ಷಗಳ ಬಳಿಕ ತನ್ನ ಮಗನನ್ನು ಕಂಡ ತಾಯಿಯ ಸಂತಷಕ್ಕೂ ಪಾರವೇ ಇರಲಿಲ್ಲ. ಕೇವಲ ಒಂದೂವರೆ ತಿಂಗಳಷ್ಟೇ ವಾಲಿದ್ ಭಾರತದಲ್ಲಿ ಇರಬಹುದು. ಹೀಗಾಗಿ ತಾಯಿ ಮಗನನ್ನು ಉಳಿಸಿಕೊಳ್ಳುವತ್ತ ಚಿಂತಿಸುತ್ತಿದ್ದಾಳೆ. ತನ್ನ ಮಗನಿಗೆ ಭಾರತೀಯ ಪೌರತ್ವ ನೀಡಿ ಎಂದು ಸರ್ಕಾರವನ್ನ ಒತ್ತಾಯಿಸುತ್ತಿದ್ದಾರೆ.
ಹೀಗೆ ವಾಲಿದ್ ಭಾರತೀಯ ಪೌರತ್ವ ನೀಡಿದರೆ ತಾವಿಬ್ಬರು ಕೂಡಿ ಬಾಳ ಬಹುದು ಎಂಬುದು ತಾಯಿಯ ಒತ್ತಾಸೆಯಾಗಿದೆ. ಈ ತಾಯಿಯ ಮನವಿಗೆ ಸ್ಥಳೀಯ ಆಡಳಿತ ಯಾವ ರೀತಿ ಒತ್ತುಕೊಡುತ್ತೆ ಅನ್ನೋದು ಕಾನೂನು ಅಂಶಗಳೇ ನಿರ್ಧರಿಸಬೇಕಿದೆ.