ನವದೆಹಲಿ: ಕೊರೊನಾ ಭೀತಿ ನಡುವೆ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್) 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಇದೀಗ ಫಲಿತಾಂಶ ಕೂಡ ಹೊರ ಬಂದಿದ್ದು, ಕೆಲವೆಡೆ ಪರೀಕ್ಷೆಗೆ ಹಾಜರಾಗಿದ್ದವರಿಗಿಂತ ಉತ್ತೀರ್ಣರಾದವರ ಸಂಖ್ಯೆಯೇ ಹೆಚ್ಚಿದೆ.
ತ್ರಿಪುರ ಮತ್ತು ಉತ್ತರಾಖಂಡದಲ್ಲಿ ಹಾಜರಾಗಿದ್ದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ಟಿಎ) ವರದಿ ಮಾಡಿದೆ.
![More students getting passed in NEET than appeared](https://etvbharatimages.akamaized.net/etvbharat/prod-images/9206229_981_9206229_1602908624322.png)
ತ್ರಿಪುರಾದಲ್ಲಿ ನೀಟ್ ಪರೀಕ್ಷೆಗೆ 3,536 ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ, ಪರೀಕ್ಷೆಯಲ್ಲಿ 88,889 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದೇ ರೀತಿ ಉತ್ತರಾಖಂಡದಲ್ಲಿ 12,047 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಸುಮಾರು 37,301 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಂಕಿಅಂಶಗಳು ತಿಳಿಸುತ್ತಿವೆ.