ETV Bharat / bharat

ಆ್ಯಂಬುಲೆನ್ಸ್​ಗೆ ಕಲ್ಲುತೂರಾಟ ನಡೆಸಿದವರಿಗೆ ಎನ್​ಎಸ್​ಎ ಅಡಿ ಕಠಿಣ ಶಿಕ್ಷೆ: ಯೋಗಿ ಆದಿತ್ಯನಾಥ್​

ಕೋವಿಡ್​ 19ನಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರನ್ನ ಮೊರಾದಬಾದ್​ನ ಕ್ವಾರಂಟೈನ್​ ಸೌಲಭ್ಯಕ್ಕೆ ಕರೆದೊಯ್ಯಲು ಹೋಗಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ಹೊತ್ತ ಆ್ಯಂಬುಲೆನ್ಸ್​​ಗೆ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ತೂರಾಟ ನಡೆಸಿದವರಿಗೆ ಎನ್​ಎಸ್​ಎ ಅಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

Moradabad incident: NSA to be slapped against perpetrators, says Adityanath
ಆಂಬುಲೆನ್ಸ್​ಗೆ ಕಲ್ಲುತೂರಾಟ ನಡೆಸಿದರಿಗೆ ಎನ್​ಎಸ್​ಎ ಅಡಿ ಕಠಿಣ:ಯೋಗಿ ಆದಿತ್ಯನಾಥ್​
author img

By

Published : Apr 15, 2020, 9:48 PM IST

Updated : Apr 16, 2020, 10:46 AM IST

ಲಖನೌ( ಉತ್ತರಪ್ರದೇಶ): ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ತಂಡ ಇದ್ದ ಆ್ಯಂಬುಲೆನ್ಸ್​​ ​ ಮೇಲೆ ಕಲ್ಲು ತೂರಾಟ ನಡೆಸಿದವರಿಗೆ ಎನ್​ಎಸ್​ಎ ಅಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

ಇಂದು ಮುಂಜಾನೆ ಕೋವಿಡ್​ 19ನಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರನ್ನ ಮೊರಾದಬಾದ್​ನ ಕ್ವಾರಂಟೈನ್​ ಸೌಲಭ್ಯಕ್ಕೆ ಕರೆದೊಯ್ಯಲು ಹೋಗಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ಹೊತ್ತ ಆಂಬುಲೆನ್ಸ್​ಗೆ ಕಲ್ಲು ತೂರಾಟ ಮಾಡಲಾಗಿದೆ. ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸ್​ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಾರೆ. ಘಟನೆಯಲ್ಲಿ ಕೆಲವು ವೈದ್ಯಕೀಯ ಸಿಬ್ಬಂದಿ ಗಾಯಗೊಂಡಿದ್ದಾರೆ. ಇವರ ಮೇಲೆ ಹಲ್ಲೆ ನಡೆಸಿರುವುದು ಕ್ಷಮಿಸಲಾರದ ಅಪರಾಧ.

ಮೊರಾದಾಬಾದ್​ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಅಮಿತ್​ ಪಾಠಕ್​, ಘಟನೆಯಲ್ಲಿ ಭಾಗಿಯಾದವರನ್ನ ಗುರುತಿಸಿದ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಎನ್​ಎಸ್​ಎ ಅಡಿ ತಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

Last Updated : Apr 16, 2020, 10:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.