ETV Bharat / bharat

ಕಪಿಚೇಷ್ಟೆಯಲ್ಲ ಪ್ರೀತಿಯ ಪರಾಕಾಷ್ಠೆ... ನಾಯಿಮರಿಯನ್ನು ತನ್ನ ಮರಿಯಂತೆಯೇ ಸಲಹುತ್ತಿದೆ ಈ ಕೋತಿ!

ಮಾತೃ ಹೃದಯವೇ ಹಾಗೇ ತನ್ನದಲ್ಲದ ಮರಿಯನ್ನೂ ಸಹ ತನ್ನ ಮರಿಯಂತೆಯೇ ಪ್ರೀತಿಯಿಂದ ಸಲಹುತ್ತದೆ. ಯಾಕೆ ಈ ಪೀಠಿಕೆ ಅಂತೀರಾ ಈ ಸ್ಟೋರಿ ನೋಡಿ.

Monkey
ಕೋತಿ
author img

By

Published : Mar 19, 2020, 4:51 PM IST

ಆಂಧ್ರಪ್ರದೇಶ/ಕರ್ನೂಲ್​: ಬೇಡ... ಯಾರೂ ಹತ್ತಿರ ಬರ್ಬೇಡಿ, ಅದು ನನ್ನ ಮಗು. ಹೀಗೆ ಆ ತಾಯಿ ಯಾರದ್ದೋ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದಾಳೆ. ಅಲ್ಲದೆ, ಹತ್ತಿರ ಬಂದವರಿಗೆ ಗುರ್ ಎನ್ನುತ್ತಿದ್ದಾಳೆ.

ಏನು ವಿಷಯ ಅಂತ ಗೊತ್ತಾಗಿಲ್ಲ ಅಲ್ವ. ಇಲ್ಲಿ ನೋಡಿ ಇದು ಆಂಧ್ರದ ಕರ್ನೂಲ್ ಜಿಲ್ಲೆಯ ಮಡ್ಡಿಕೆರಾ ಉಪನಗರದಲ್ಲಿರುವ ಉದ್ಯಾನದಲ್ಲಿ ನಡಿದಿರೋ ಘಟನೆ. ಇಲ್ಲಿ ಕೋತಿಯೊಂದು ನಾಯಿಮರಿಯೊಂದನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಸಲಹುತ್ತಿದೆ. ಅದು ಹೋದಲ್ಲೆಲ್ಲಾ ಆ ನಾಯಿ ಮರಿಯನ್ನು ಕೊಂಡೊಯುತ್ತಿದೆ. ಯಾರಾದರೂ ಮರಿಯನ್ನು ಕೊಳ್ಳಲು ಹತ್ತಿರ ಬಂದರೆ ಮರ ಹತ್ತಿ ಕುಳಿತುಕೊಳ್ಳತ್ತಂತೆ.

ಕೋತಿಯೊಂದು ನಾಯಿಮರಿಯನ್ನು ಸಲಹುತ್ತಿರುವುದು

ಇನ್ನು ಸ್ಥಳೀಯರು ಹಲವು ಬಾರಿ ಆ ನಾಯಿ ಮರಿಯನ್ನು ಕೋತಿಯಿಂದ ಬೇರ್ಪಡಿಸಲು ಪಟ್ಟ ಪ್ರಯತ್ನ ವಿಫಲವಾಗಿದೆ. ನಾಯಿ ಬಳಿ ಯಾರಾದ್ರೂ ಬಂದರೆ ಅವರ ಮೇಲೆ ದಾಳಿ ಮಾಡುತ್ತಿದೆಯಂತೆ. ಕೋತಿ ತನ್ನ ಸ್ವಂತ ಮರಿಯಂತೆಯೇ ನಾಯಿಮರಿಯನ್ನು ನೊಡಿಕೊಳ್ಳುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.