ನವದೆಹಲಿ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಎಫ್ಐಆರ್ ವಜಾಗೊಳಿಸಲು ಹಾಗೂ ಮಧ್ಯಂತರ ಜಾಮೀನು ವಿಸ್ತರಣೆಗೆ ಕೋರಿ ಆರೋಪಿಗಳಾದ ರಾಬರ್ಟ್ ವಾದ್ರಾ ಹಾಗೂ ಮನೋಜ್ ಅರೋರ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
"ಪಟಿಯಾಲಾ ಹೌಸ್ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಇದೀಗ ನಾವು ಹಸ್ತಕ್ಷೇಪ ಮಾಡುವುದಿಲ್ಲ" ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ವಿನೋದ್ ಗೋಯೆಲ್ ಒಳಗೊಂಡ ವಿಭಾಗೀಯ ಪೀಠ ತಿಳಿಸಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸೋದರ ಸಂಬಂಧಿ ವಾದ್ರಾ ಮತ್ತು ಅವರ ಸಹಾಯಕ ಅರೋರ ವಿರುದ್ಧ ದೆಹಲಿಯಲ್ಲಿ ದಾಖಲಾದ ಎಫ್ಐಆರ್ ಅಥವಾ ಎನ್ಫೋರ್ಸ್ಮೆಂಟ್ ಕೇಸ್ ಇನ್ಫಾರ್ಮೇಶನ್ ರಿಪೋರ್ಟ್ನ ಪ್ರತಿಯನ್ನು ಒದಗಿಸುವಂತೆ ಕೋರ್ಟ್, ED ಗೆ ನಿರ್ದೇಶನ ನೀಡಿದೆ. ಅಲ್ಲದೇ ವಾದ್ರಾ ಮತ್ತು ಅರೋರಾ ಎಫ್ಐಆರ್ ವಜಾಗೊಳಿಸಲು ಸಲ್ಲಿಸಿರುವ ಮನವಿಯು ಕಾನೂನು ಪ್ರಕ್ರಿಯೆಯ ದುರ್ಬಳಕೆಯೆಂದು ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಾಲಯವು ಕೇಂದ್ರದ ಪ್ರತಿಕ್ರಿಯೆ ಪಡೆದು, ಪ್ರಕರಣದ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿದೆ.