ಅಟ್ಲಾಂಟಾ(ಅಮೆರಿಕ): ನಾವೆಲ್ಲಾ ಹಣದ ಮಳೆ ಅಂತೆಲ್ಲಾ ಕೇಳಿದ್ದೇವೆ. ಆದ್ರೆ, ನಿಜವಾಗ್ಲೂ ಹಣದ ಮಳೆ ಹೇಗಿರುತ್ತೆ ಅನ್ನೋದನ್ನು ನೋಡಿದ್ದೀರಾ? ಅಮೆರಿಕದ ಅಟ್ಲಾಂಟದಲ್ಲಿ ನಡೆದ ಘಟನೆ ಇದು.
ಮಂಗಳವಾರ ರಾತ್ರಿ ಸುಮಾರು 1 ಕೋಟಿ ಹಣ ತೆಗೆದುಕೊಂಡು ಬೃಹತ್ ಟ್ರಕ್ ಅಟ್ಲಾಂಟದ ರಸ್ತೆಯಲ್ಲಿ ಸಾಗುತ್ತಿತ್ತು. ಈ ವೇಳೆ ಟ್ರಕ್‌ನ ಬಾಗಿಲು ಅಚಾನಕ್ ಆಗಿ ತೆರೆದುಕೊಂಡಿದೆ. ಹೀಗಾಗಿ ಸುಮಾರು 1 ಕೋಟಿಗೂ ಅಧಿಕ ಮೊತ್ತದ ಹಣ ಮಳೆಯಂತೆ ಚದುರಿ ರಸ್ತೆಯುದ್ದಕ್ಕೂ ಚದುರಿ ಬಿದ್ದಿದೆ.
ಹಣ ರಸ್ತೆಯಲ್ಲಿ ಹಾರಾಡುವುದನ್ನು ಕಂಡ ವಾಹನ ಚಾಲಕರಲ್ಲಿ ಅನೇಕರು ಅದನ್ನು ಸಂಗ್ರಹಸುವುದರಲ್ಲಿ ತಲ್ಲೀನರಾದ್ರೆ, ಇನ್ನೂ ಕೆಲವರು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾದ್ರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯಾತ್ಯಕವಾಗಿ ಕಾಮೆಂಟ್‌ಗಳ ಸುರಿಮಳೆಗೈಯ್ಯುತ್ತಿದ್ದಾರೆ.
ಕೆಲವರು ಅಯ್ಯೋ ಈ ವೇಳೆ ನಾನು ಮಿಸ್ ಮಾಡ್ಕೊಂಡನಲ್ಲಾ! ಅಂತಾ ಪಶ್ಚಾತ್ತಾಪ ಪಟ್ರೆ, ಇನ್ನೂ ಕೆಲವರು, ರಸ್ತೆಗೆ ಬಿದ್ದ ಹಣ ಸಂಗ್ರಹಿಸುವುದನ್ನು ಕಂಡು, ಇಷ್ಟೊಂದು ಜನ ಈ ರೀತಿ ಪರಿಸರದ ಬಗ್ಗೆ ಕಾಳಜಿ ತೋರಿಸುವುದನ್ನು ನಾನು ನೋಡಿಲ್ಲ ಎಂದು ಜೋಕ್ ಮಾಡಿದ್ದಾರೆ.