ETV Bharat / bharat

ಯಾವುದೇ ಹಿಂದೂ, ಭಾರತ ವಿರೋಧಿ ಆಗಲು ಸಾಧ್ಯವಿಲ್ಲ : ಮೋಹನ್​ ಭಾಗವತ್

author img

By

Published : Jan 2, 2021, 1:52 PM IST

ಧರ್ಮ ಎಂದರೆ ಕೇವಲ ರಿಲೀಜನ್ ಎಂದಷ್ಟೇ ಅರ್ಥವಲ್ಲ. ಆ ಪದಕ್ಕೆ ವಿಶಾಲ ಅರ್ಥವಿದೆ. ಮಹಾತ್ಮಾ ಗಾಂಧೀಜಿಯವರ ಆಲೋಚನೆಗಳು ಮತ್ತು ಮೌಲ್ಯಗಳು ಇವತ್ತಿಗೂ ಮಾದರಿಯಾಗಿವೆ. ಆದರೆ, ಅವುಗಳನ್ನು ನಾವು ಇಂದು ಸರಿಯಾಗಿ ಪಾಲಿಸುತ್ತಿಲ್ಲ..

ನವದೆಹಲಿ : ಯಾವುದೇ ಹಿಂದೂ ಭಾರತದ ವಿರುದ್ಧ ದುಷ್ಕೃತ್ಯ ಎಸಗಲು ಅಥವಾ ಭಾರತ ವಿರೋಧಿ ಆಗಲು ಸಾಧ್ಯವಿಲ್ಲ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.

ಮೋಹನ್​ ಭಾಗವತ್ ಹೇಳಿಕೆ

ನಿನ್ನೆ ದೆಹಲಿಯ ರಾಜಘಾಟ್​ನ ಗಾಂಧಿ ದರ್ಶನದಲ್ಲಿ ನಡೆದ ‘ಮೇಕಿಂಗ್ ಆಫ್ ಹಿಂದೂ ಪೆಟ್ರಿಯೆಟ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಮೊಹನ್ ಭಾಗವತ್, ವ್ಯಕ್ತಿಯ ದೇಶಪ್ರೇಮವು ಆತನ ಧರ್ಮದಿಂದ ಹುಟ್ಟಿಕೊಳ್ಳುತ್ತದೆ ಎಂದು ಗಾಂಧೀಜಿ ಹೇಳಿದ್ದಾರೆ.

ಭಾರತದಲ್ಲಿರುವ ಪ್ರತಿ ವ್ಯಕ್ತಿಯು ಈ ಭೂಮಿಯನ್ನು ತನ್ನದೆಂದು ಪರಿಗಣಿಸುತ್ತಾನೆ. ಎಲ್ಲರೂ ಭೂಮಿಯನ್ನು ಪೂಜಿಸುತ್ತಾರೆ. ಹಿಂದೂ ಆಗಿದ್ದರೆ ಅವರು ದೇಶಭಕ್ತರಾಗಬೇಕು, ಒಂದು ವೇಳೆ ಅವರು ನಿದ್ರೆಯಲ್ಲಿದ್ದರೆ ಅವರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಬೇಕು. ಯಾವುದೇ ಹಿಂದೂ ಭಾರತ ವಿರೋಧಿ ಅಲ್ಲ ಎಂದು ಹೇಳಿದ್ದಾರೆ.

ಅಂದರೆ ಕೇವಲ ಭೂಮಿಯನ್ನು ಮಾತ್ರ ಪ್ರೀತಿಸುತ್ತಾನೆಂದಲ್ಲ. ಅವನು ಆ ದೇಶದ ಜನ, ನದಿಗಳು, ಸಂಸ್ಕೃತಿ, ಸಂಪ್ರದಾಯ ಎಲ್ಲವನ್ನೂ ಪ್ರೀತಿಸುತ್ತಾನೆಂದು ಅರ್ಥ. ನನ್ನ ಧರ್ಮವನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡು ಉತ್ತಮ ದೇಶಭಕ್ತನಾಗಿ ಬೇರೆಯವರು ಕೂಡ ಅದೇ ರೀತಿ ಆಗುವಂತೆ ಉತ್ತೇಜನ ಮತ್ತು ಸ್ಫೂರ್ತಿ ತುಂಬುತ್ತೇನೆ ಎಂದು ತಿಳಿಸಿದ್ದಾರೆ.

ಮಹಾತ್ಮಾ ಗಾಂಧಿ ಕುರಿತಾದ ಸಂಶೋಧನಾ ದಾಖಲೆ ಪುಸ್ತಕದ ಬಗ್ಗೆ ಮಾತನಾಡಿದ ಭಾಗವತ್, ತಮ್ಮ ಪಾಲಿಗೆ ಧರ್ಮ ಮತ್ತು ದೇಶಪ್ರೇಮ ಬೇರೆಯಲ್ಲ. ತಾಯ್ನಾಡಿನ ಮೇಲಿನ ಪ್ರೀತಿ ಅಧ್ಯಾತ್ಮದಿಂದ ಹುಟ್ಟಿಕೊಂಡಿದೆ. ನನ್ನ ದೇಶಪ್ರೇಮವು ಧರ್ಮದಿಂದ ಹುಟ್ಟಿಕೊಂಡಿರುವುದು ಎಂದು ಗಾಂಧಿ ಹೇಳಿದ್ದರು.

ಧರ್ಮ ಎಂದರೆ ಕೇವಲ ರಿಲೀಜನ್ ಎಂದಷ್ಟೇ ಅರ್ಥವಲ್ಲ. ಆ ಪದಕ್ಕೆ ವಿಶಾಲ ಅರ್ಥವಿದೆ. ಮಹಾತ್ಮಾ ಗಾಂಧೀಜಿಯವರ ಆಲೋಚನೆಗಳು ಮತ್ತು ಮೌಲ್ಯಗಳು ಇವತ್ತಿಗೂ ಮಾದರಿಯಾಗಿವೆ. ಆದರೆ, ಅವುಗಳನ್ನು ನಾವು ಇಂದು ಸರಿಯಾಗಿ ಪಾಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿಕಿತ್ಸೆಗಾಗಿ ಅಮೆರಿಕಕ್ಕೆ ಹಾರಿದರಾ ರಜನಿಕಾಂತ್..?

ಬ್ರಿಟಿಷರಿಂದ ಅಧಿಕಾರವನ್ನು ವಶಪಡಿಸಿಕೊಳ್ಳುವುದು ಮಾತ್ರ ಗಾಂಧೀಜಿಯವರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಟವಾಗಿರಲಿಲ್ಲ, ಭಾರತದ ಮರು ನಿರ್ಮಾಣಕ್ಕಾಗಿ ಗಾಂಧೀಜಿ ಹೋರಾಡಿದರು. ತಮ್ಮ ಹೋರಾಟವನ್ನು ನಾಗರಿಕತೆಯ ಹೋರಾಟ ಎಂದು ಗಾಂಧೀಜಿ ಹೇಳಿದ್ದರು.

ಸ್ವರಾಜ್ಯವನ್ನು ಅರ್ಥ ಮಾಡಿಕೊಳ್ಳಲು ಸ್ವಧರ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಸ್ವಧರ್ಮವನ್ನು ಅರ್ಥ ಮಾಡಿಕೊಳ್ಳುವವರೆಗೂ ನಮಗೆ ಗಾಂಧೀಜಿಯವರ ಸ್ವರಾಜ್ಯದ ಬಗ್ಗೆ ಅರ್ಥವಾಗಲಿಕ್ಕಿಲ್ಲ ಎಂದಿದ್ದಾರೆ.

ಡಾ.ಜಿತೇಂದ್ರ ಕುಮಾರ್ ಬಜಾಜ್ ಮತ್ತು ಪ್ರೊ.ಎಂ.ಡಿ.ಶ್ರೀನಿವಾಸ್ ಅವರು ಬರೆದಿರುವ, ‘ಮೇಕಿಂಗ್ ಎ ಹಿಂದೂ ಪೆಟ್ರಿಯೆಟ್: ಬ್ಯಾಕ್‌ಗ್ರೌಂಡ್ ಆಫ್ ಗಾಂಧೀಜಿಸ್ ಹಿಂದ್ ಸ್ವರಾಜ್’ ಹೆಸರಿನ 1,043 ಪುಟಗಳ ಪುಸ್ತಕವನ್ನು ಮೋಹನ್ ಭಾಗವತ್ ಬಿಡುಗಡೆ ಮಾಡಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.