ಫ್ರಾನ್ಸ್: ಬಿಯಾರಿಟ್ಸ್ನಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಈ ವೇಳೆ ಟ್ರಂಪ್ ಪ್ರಧಾನಿ ಮೋದಿ ಕಾಲೆಳೆದಿರುವ ಘಟನೆ ನಡೆದಿದೆ.
ಉಭಯ ದೇಶದ ನಾಯಕರು ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದ ವೇಳೆ ಪತ್ರಕರ್ತನೋರ್ವ ಪ್ರಧಾನಿ ಮೋದಿ ಬಳಿ ಪ್ರಶ್ನೆ ಕಾಲೆಳೆದಿದ್ದಾರೆ. ಈ ವೇಳೆ ಮೋದಿ ಹಿಂದಿಯಲ್ಲೇ ಉತ್ತರ ನೀಡಿದ್ದಾರೆ. ತಕ್ಷಣ ಮಧ್ಯೆ ಮಾತನಾಡಿದ ಟ್ರಂಪ್, ಮೋದಿ ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಆದರೆ ಇಲ್ಲಿ ಮಾತನಾಡಲು ಬಯಸುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ವೇಳೆ ಎಲ್ಲರೂ ನಕ್ಕಿದ್ದಾರೆ.
ಅಮೆರಿಕ, ಫ್ರಾನ್ಸ್, ಭಾರತ ಸೇರಿದಂತೆ ಏಳು ರಾಷ್ಟ್ರಗಳು ಭಾಗಿಯಾಗಿದ್ದು, ಮಹತ್ವದ ಮಾತುಕತೆ ನಡೆಸುತ್ತಿವೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರೊಂದಿಗೆ ಜಮ್ಮು-ಕಾಶ್ಮೀರ ವಿಚಾರವಾಗಿ ಚರ್ಚೆ ನಡೆಸಿದರು.