ETV Bharat / bharat

ಹಾಕಿ ದಂತಕತೆ ಬಲ್ಬೀರ್​​ ಸಿಂಗ್​ ನಿಧನ: ಸಂತಾಪ ಸೂಚಿಸಿದ ಅಮಿತ್​​ ಶಾ - ಹಾಕಿ ದಂತಕತೆ ಬಲ್ಬೀರ್​​ ಸಿಂಗ್​ ನಿಧನ

ಭಾರತಕ್ಕೆ 3 ಒಲಿಂಪಿಕ್ಸ್​​​​ಗಳಲ್ಲಿ ಚಿನ್ನದ​ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಲ್ಬೀರ್​ ಸಿಂಗ್​ ನಿಧನಕ್ಕೆ ಕ್ರೀಡಾಲೋಕವೇ ಸಂತಾಪ ಸೂಚಿಸಿದೆ.

Modi, Shaw Twitter condolence on Balbir SIngh death
ಬಲ್ಬೀರ್​ ಸಿಂಗ್​ ನಿಧನ
author img

By

Published : May 25, 2020, 3:57 PM IST

ನವದೆಹಲಿ: ಹಾಕಿಪಟು ಮತ್ತು ಪದ್ಮಶ್ರೀ ಬಲ್ಬೀರ್​​ ಸಿಂಗ್​ (95) ಅವರ ನಿಧನಕ್ಕೆ ಗೃಹ ಸಚಿವ ಅಮಿತ್​​ ಶಾ ತೀವ್ರ ಸಂತಾಪ ಸೂಚಿಸಿದ್ದಾರೆ.

ಬಲ್ಬೀರ್​​ ಸಿಂಗ್ ಅವರು 1948ರ ಲಂಡನ್‌ ಒಲಿಂಪಿಕ್ಸ್‌, 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ ಮತ್ತು 1956ರ ಮೆಲ್ಬೋರ್ನ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ತೀವ್ರ ಉಸಿರಾಟದ ತೊಂದರೆ, ಹೃದಯಾಘಾತಕ್ಕೂ ಒಳಗಾಗಿದ್ದ ಸಿಂಗ್​ ಅವರು, ಮೇ 18ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಸ್ಪಂದಿಸದೇ ಇಂದು ಬೆಳಗ್ಗೆ 6.30ರ ಸುಮಾರಿಗೆ ಮೊಹಾಲಿಯ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಮೃತಪಟ್ಟರು.

ಇದನ್ನೂ ಓದಿ...ಹಾಕಿ ಲೆಜೆಂಡ್ ಬಲ್ಬೀರ್​ ಸಿಂಗ್​ ನಿಧನಕ್ಕೆ ಕಂಬನಿ ಮಿಡಿದ ಕ್ರೀಡಾ ದಿಗ್ಗಜರು

ಬಲ್ಬೀರ್​ ಸಿಂಗ್​ ಅವರು ಕ್ರೀಡಾ ಪ್ರದರ್ಶನದ ಮೂಲಕ ದೇಶಕ್ಕೆ ಅಪಾರ ಕೀರ್ತಿ ತಂದುಕೊಟ್ಟಿದ್ದಾರೆ. ಅವರೊಬ್ಬ ಅದ್ಭುತ ಹಾಕಿ ಆಟಗಾರ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಉತ್ತಮ ತರಬೇತುದಾರರಾಗಿಯೂ ಗುರುತಿಸಿಕೊಂಡಿದ್ದರು. ಅವರ ನಿಧನ ಬಹಳ ನೋವುಂಟು ಮಾಡಿದೆ. ಕುಟುಂಬದವರು ಮತ್ತು ಹಿತೈಷಿಗಳಿಗೆ ನನ್ನ ಸಾಂತ್ವನ ಎಂದು ಟ್ವಿಟರ್​​ನಲ್ಲಿ ಮೋದಿ ಸಂತಾಪ ಸೂಚಿಸಿದ್ದಾರೆ.

  • Padma Shri Balbir Singh Sr. Ji will be remembered for his memorable sporting performances. He brought home lots of pride and laurels. Undoubtedly a brilliant hockey player, he also made a mark as a great mentor. Pained by his demise. Condolences to his family and well wishers.

    — Narendra Modi (@narendramodi) May 25, 2020 " class="align-text-top noRightClick twitterSection" data=" ">

ಬಲ್ಬೀರ್ ಸಿಂಗ್ ಅವರ ನಿಧನದ ಬಗ್ಗೆ ತಿಳಿದು ದುಃಖ ತಪ್ತನಾಗಿದ್ದೇನೆ. ಮೂರು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಬಲ್ಬೀರ್ ಅವರನ್ನು ಭೇಟಿ ಮಾಡುವ ಅದೃಷ್ಟ ನನ್ನದಾಗಿತ್ತು. ಅವರ ಕುಟುಂಬಕ್ಕೆ ನನ್ನ ಸಂತಾಪ ಎಂದು ಅಮಿತ್​ ಶಾ ಹೇಳಿದ್ದಾರೆ.

  • Pained to learn about the demise of Padma Shri Balbir Singh Sr ji, a legendary hockey player, who left indelible imprint on world hockey with his stick.

    I was fortunate to have met the lively and joyful Balbir ji, a three time Olympic gold medalist. My condolences to his family. pic.twitter.com/rgQFi3yB8V

    — Amit Shah (@AmitShah) May 25, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.