ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರದ ಮೇಲೆ ಮತ್ತೊಮ್ಮೆ ವಾಗ್ದಾಳಿ ನಡೆದ್ದಾರೆ.
ಕೋವಿಡ್-19ನಿಂದಾಗಿ 10 ಕೋಟಿ ಉದ್ಯೋಗಗಳು ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ರಾಹುಲ್, ವಾಣಿಜ್ಯ ವಿಚಾರವಾಗಿ ಸಂಸದೀಯ ಸಮಿತಿಯ ಸಭೆಯ ಸುದ್ದಿಯ ವರದಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮೋದಿ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ರಾಹುಲ್, ಅಪನಗದೀಕರಣ, ಜಿಎಸ್ಟಿ, ಕೋವಿಡ್ -19 ಸಾಂಕ್ರಾಮಿಕ ರೋಗ ಹಾಗೂ ಆರ್ಥಿಕತೆ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದಂತೆ ವಿನಾಶ ಎಂಬ ನಾಲ್ಕು ವಿಷಯಗಳನ್ನು ಉಲ್ಲೇಖಿಸಿ ಟ್ವಿಟರ್ನಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದಕೊಂಡಿದ್ದಾರೆ.
-
मोदी देश को बर्बाद कर रहे हैं।
— Rahul Gandhi (@RahulGandhi) July 30, 2020 " class="align-text-top noRightClick twitterSection" data="
1. नोटबंदी
2. GST
3. कोरोना महामारी में दुर्व्यवस्था
4. अर्थव्यवस्था और रोज़गार का सत्यानाश
उनके पूँजीवादी मीडिया ने एक मायाजाल रचा है। ये भ्रम जल्द ही टूटेगा।https://t.co/8JWoOY1jGK
">मोदी देश को बर्बाद कर रहे हैं।
— Rahul Gandhi (@RahulGandhi) July 30, 2020
1. नोटबंदी
2. GST
3. कोरोना महामारी में दुर्व्यवस्था
4. अर्थव्यवस्था और रोज़गार का सत्यानाश
उनके पूँजीवादी मीडिया ने एक मायाजाल रचा है। ये भ्रम जल्द ही टूटेगा।https://t.co/8JWoOY1jGKमोदी देश को बर्बाद कर रहे हैं।
— Rahul Gandhi (@RahulGandhi) July 30, 2020
1. नोटबंदी
2. GST
3. कोरोना महामारी में दुर्व्यवस्था
4. अर्थव्यवस्था और रोज़गार का सत्यानाश
उनके पूँजीवादी मीडिया ने एक मायाजाल रचा है। ये भ्रम जल्द ही टूटेगा।https://t.co/8JWoOY1jGK
ಮೋದಿಯ ಬಂಡವಾಳಶಾಹಿ ಮಾಧ್ಯಮವು ಒಂದು ಭ್ರಮೆ ಸೃಷ್ಟಿಸಿದೆ. ಅದು ಶೀಘ್ರದಲ್ಲೇ ಮುರಿಯಲಿದೆ ಎಂದು ವಯನಾಡ್ ಕಾಂಗ್ರೆಸ್ ಸಂಸದರು ಟೀಕಿಸಿದ್ದಾರೆ.
ಕಳೆದ ಕೆಲ ವಾರಗಳಿಂದ ಕಾಂಗ್ರೆಸ್ ನಾಯಕ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಕೋವಿಡ್ -19 ರೋಗವನ್ನು ಕೇಂದ್ರ ನಿಭಾಯಿಸುತ್ತಿರುವ ರೀತಿ, ಚೀನಾದೊಂದಿಗಿನ ಗಡಿ ಉದ್ವಿಗ್ನತೆ ಮತ್ತು ರಫೇಲ್ ಒಪ್ಪಂದ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.