ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಕ್ಸಮರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ, ಮೋದಿ ಹೋಂವರ್ಕ್ ಮಾಡದ ಶಾಲೆಯ ಬಾಲಕನಂತೆ ಪ್ರತಿಯೊಂದಕ್ಕೂ ನೆಪ ಹೇಳುತ್ತಾರೆ ಎಂದು ಕಾಲೆಳೆದರು.
ನವದೆಹಲಿಯಲ್ಲಿ ಶೀಲಾ ದೀಕ್ಷಿತ್ ಪರ ಪ್ರಚಾರ ಮಾಡಿದ ಅವರು, ಮೋದಿ ತಮ್ಮ ಹುಳುಕುಗಳನ್ನು ಮುಚ್ಚಿ ಹಾಕಲು ನೆಹರು ಕುಟುಂಬದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಮೋದಿ ಹೋಂವರ್ಕ್ ಮಾಡದ ಶಾಲೆಯ ಹುಡುಗನಂತಾಗಿದ್ದಾರೆ. ಟೀಚರ್ ಏಕೆ ಹೋಂವರ್ಕ್ ಮಾಡಲಿಲ್ಲ ಎಂದು ಮೋದಿಗೆ ಕೇಳಿದರೆ ಎಂದರೆ ಜವಾಹರ್ಲಾಲ್ ನೆಹರು ಪೇಪರ್ ಕಿತ್ತುಕೊಂಡರು, ಇಂದಿರಾ ಗಾಂಧಿ ಆ ಪೇಪರ್ನಲ್ಲಿ ದೋಣಿ ಮಾಡಿ ನೀರಿಗೆ ಬಿಟ್ಟರು ಎಂಬೆಲ್ಲಾ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಪ್ರಧಾನಿಗೆ ಬಹಿರಂಗ ಸವಾಲು ಹಾಕಿರುವ ಪ್ರಿಯಾಂಕಾ, ನೋಟು ಅಮಾನ್ಯೀಕರಣ, ಜಿಎಸ್ಟಿ, ಮಹಿಳಾ ಭದ್ರತೆಯನ್ನೇ ಮುಂದಿಟ್ಟುಕೊಂಡು ಚುನಾವಣೆ ಗೆದ್ದು ತೋರಿಸಿ ಎಂದಿದ್ದಾರೆ.
ಈ ಹಿಂದೆ ಮತಬೇಟೆಯ ವೇಳೆ ಮಾತನಾಡಿದ ಮೋದಿ 'ಭ್ರಷ್ಟಾಚಾರಿ ನಂ1' ರಾಜೀವ್ ಗಾಂಧಿ ಹೆಸರಿನಲ್ಲಿ ಪ್ರಿಯಾಂಕಾ ಚುನಾವಣೆ ಗೆಲ್ಲಲಿ ಎಂದು ಸವಾಲು ಹಾಕಿದ್ದರು.