ETV Bharat / bharat

ಮೋದಿ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಬಂಪರ್​​... ಬರೋಬ್ಬರಿ 6,268 ಕೋಟಿ ರೂ. ಸಬ್ಸಿಡಿ ಘೋಷಣೆ - 75 ಮೆಡಿಕಲ್​ ಕಾಲೇಜ್

ದೇಶದಲ್ಲಿ ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಬಂಪರ್​ ಕೊಡುಗೆ ಘೋಷಣೆ ಮಾಡಲಾಗಿದ್ದು, ಕಬ್ಬು ಬೆಳೆಗೆ ಸಬ್ಸಿಡಿ ಹಣ ಘೋಷಣೆ ಮಾಡಲಾಗಿದ್ದು, ಅದು ನೇರವಾಗಿ ರೈತರ ಬ್ಯಾಂಕ್​ ಖಾತೆಗೆ ಸೇರ್ಪಡೆಯಾಗಲಿದೆ.

ಕಬ್ಬು ಬೆಳಗಾರರಿಗೆ ಬಂಪರ್​​
author img

By

Published : Aug 28, 2019, 7:30 PM IST

Updated : Aug 28, 2019, 8:11 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಕಬ್ಬು ಬೆಳೆಗಾರರಿಗೆ ನರೇಂದ್ರ ಮೋದಿ ಸರ್ಕಾರ ಭಾರಿ ಸಹಾಯಧನ ನೀಡಿ ಘೋಷಣೆ ಮಾಡಿದೆ. ಪ್ರತಿವರ್ಷ 60 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಮಾಡಲಾಗುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 6 ಸಾವಿರ 268 ಕೋಟಿ ರೂ.ಗಳ ಸಬ್ಸಿಡಿ ನೀಡಲು ಇಂದಿನ ಕ್ಯಾಬಿನೆಟ್​ ಸಭೆಯಲ್ಲಿ ನಿರ್ಧರಿಸಿದ್ದು, ಅದು ನೇರವಾಗಿ ರೈತರ ಖಾತೆಗೆ ಸೇರ್ಪಡೆಯಾಗಲಿದೆ.

ಪ್ರಕಾಶ್​ ಜಾವ್ಡೇಕರ್​​​

ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಪ್ರಕಾಶ್​ ಜಾವ್ಡೇಕರ್ ಈ ಮಾಹಿತಿ ನೀಡಿದರು.

ದೇಶದಲ್ಲಿ ರೈತರು ಬೆಳೆಯುವ ಕಬ್ಬಿಗೆ ಈ ಸಬ್ಸಿಡಿ ಹಣ ದೊರೆಯಲಿದೆ. ಇದರ ಜತೆಗೆ ದೇಶದಲ್ಲಿ 75 ಮೆಡಿಕಲ್​ ಕಾಲೇಜ್ ತೆರೆಯಲು ಇಂದಿನ ಕ್ಯಾಬಿನೆಟ್​​ನಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ 24 ಸಾವಿರ ಕೋಟಿ ರೂ ಮೀಸಲಿಡಲು ತೀರ್ಮಾಣ ಕೈಗೊಳ್ಳಲಾಗಿದ್ದು, ಇದರಿಂದ ದೇಶದ ತುಂಬ 15,700 ನೂತನ ಎಂಬಿಬಿಎಸ್​ ಸೀಟು ನಿರ್ಮಾಣವಾಗಲಿವೆ ಎಂದು ತಿಳಿಸಿದರು.

Union Minister Prakash Javadekar
ಪ್ರಕಾಶ್​ ಜಾವ್ಡೇಕರ್​​​

ವೈದ್ಯರ ಸೇವೆ ಗ್ರಾಮೀಣ ಪ್ರದೇಶಗಳಿಗೂ ಅವರ ಸೇವೆ ಲಭ್ಯವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಡಿಜಿಟಲ್​ ಮಿಡಿಯಾದಲ್ಲಿ ಶೇ 26ರಷ್ಟು ವಿದೇಶಿ ಬಂಡವಾಳ ಹಾಗೂ ಗಣಿಗಾರಿಕೆಯಲ್ಲಿ ಶೇ 100ರಷ್ಟು ವಿದೇಶಿ ಬಂಡವಾಳ ಹೂಡಿಕೆ ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್​ ಗೋಯಲ್​ ತಿಳಿಸಿದರು.

Intro:Body:

ಮೋದಿ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಬಂಪರ್​​... ಸಬ್ಸಿಡಿ ಹಣ ನೇರವಾಗಿ ರೈತರ ಖಾತೆಗೆ! 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, 60 ಲಕ್ಷ ಮೆಟ್ರಿಕ್​ ಟನ್​ ಕಬ್ಬು ಬೆಳೆದು ರಫ್ತು ಮಾಡುವ ರೈತರಿಗೆ ಸಬ್ಸಿಡಿ ಹಣ ಘೋಷಣೆ ಮಾಡಿದೆ. ಈ ಹಣ ನೇರವಾಗಿ ರೈತರ ಖಾತೆಗೆ ಸೇರ್ಪಡೆಯಾಗಲಿದೆ. 

ದೇಶದಲ್ಲಿ ರೈತರು ಬೆಳೆಯುವ ಕಬ್ಬಿಗೆ ಈ ಸಬ್ಸಿಡಿ ಹಣ ದೊರೆಯಲಿದೆ. ಇದರ ಜತೆಗೆ ದೇಶದಲ್ಲಿ 75 ಮೆಡಿಕಲ್​ ಕಾಲೇಜ್ ತೆರೆಯಲು ಇಂದಿನ ಕ್ಯಾಬಿನೆಟ್​​ನಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ 24 ಸಾವಿರ ಕೋಟಿ ರೂ ಮೀಸಲಿಡಲು ತೀರ್ಮಾಣ ಕೈಗೊಳ್ಳಲಾಗಿದ್ದು, ಇದರಿಂದ ದೇಶದ ತುಂಬ 15,700 ನೂತನ ಎಂಬಿಬಿಎಸ್​ ಸೀಟು ನಿರ್ಮಾಣವಾಗಲಿವೆ ಎಂದು ತಿಳಿಸಿದರು. 

ವೈದ್ಯರ  ಸೇವೆ ಗ್ರಾಮೀಣ ಪ್ರದೇಶಗಳಿಗೂ ಅವರ ಸೇವೆ ಲಭ್ಯವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. 

Conclusion:
Last Updated : Aug 28, 2019, 8:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.