ನವದೆಹಲಿ: ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ತೇಜೋವಧೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸಿನ ಹಿರಿಯ ನಾಯಕ, ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕೃತಗೊಳಿಸಿತ್ತು. ಇದರ ಬೆನ್ನಲ್ಲೇ ಕೇಂದ್ರೀಯ ತನಿಖಾ ತಂಡ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಚಿದಂಬರಂ ಮನೆಗೆ ಭೇಟೆ ನೀಡಿದ್ದರು.
ಮೋದಿ ಸರ್ಕಾರ 'ಸಿಬಿಐ' ಮತ್ತು 'ಇಡಿ' ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟ್ವಿಟರ್ನಲ್ಲಿ ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದ್ದಾರೆ.
-
Modi's Govt is using the ED, CBI & sections of a spineless media to character assassinate Mr Chidambaram.
— Rahul Gandhi (@RahulGandhi) August 21, 2019 " class="align-text-top noRightClick twitterSection" data="
I strongly condemn this disgraceful misuse of power.
">Modi's Govt is using the ED, CBI & sections of a spineless media to character assassinate Mr Chidambaram.
— Rahul Gandhi (@RahulGandhi) August 21, 2019
I strongly condemn this disgraceful misuse of power.Modi's Govt is using the ED, CBI & sections of a spineless media to character assassinate Mr Chidambaram.
— Rahul Gandhi (@RahulGandhi) August 21, 2019
I strongly condemn this disgraceful misuse of power.
ಮೋದಿ ಸರ್ಕಾರ, ಸಿಬಿಐ, ಇಡಿ ಮೂಲಕ ಚಿದಂಬರಂ ಅವರ ತೇಜೋವಧೆ ಮಾಡುತ್ತಿದೆ. ಅಧಿಕಾರದ ದುರುಪಯೋಗವನ್ನು ನಾನು ಬಲವಾಗಿ ಖಂಡಿಸುತ್ತೇನೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.