ಚಿತ್ತೂರ್(ಆಂಧ್ರಪ್ರದೇಶ): ಮೊಬೈಲ್ ಸಾಗಿಸುತ್ತಿದ್ದ ಲಾರಿ ಸಿನಿಮೀಯ ಶೈಲಿಯಲ್ಲಿ ಹೈಜಾಕ್ ಮಾಡಿರುವ ದುಷ್ಕರ್ಮಿಗಳು ಅದರಲ್ಲಿದ್ದ 7 ಕೋಟಿ ರೂ. ಮೌಲ್ಯದ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
![MOBILE PHONES LORRY](https://etvbharatimages.akamaized.net/etvbharat/prod-images/05:38:38:1598443718_ap-tpt-11-26-cellphone-lorry-chori-avb-3181980_26082020164653_2608f_1598440613_681_2608newsroom_1598443497_117.jpg)
ಆಂಧ್ರಪ್ರದೇಶ - ತಮಿಳುನಾಡು ಗಡಿಯಲ್ಲಿ ಈ ಘಟನೆ ನಡೆದಿದೆ. ಕಾಂಚಿಪುರಂ ಶ್ರೀಪೆರುಂಬೂರಿನಿಂದ ಮುಂಬೈಗೆ ತೆರಳುತ್ತಿದ್ದ ಲಾರಿಯಲ್ಲಿ ಶಿಯೋಮಿ ಕಂಪನಿ ಮೊಬೈಲ್ಗಳಿದ್ದವು. ಗಡಿಯಲ್ಲಿ ಲಾರಿ ಬರುತ್ತಿದ್ದಂತೆ ಅದನ್ನ ತಡೆದಿರುವ ದುಷ್ಕರ್ಮಿಗಳು ಲಾರಿ ಚಾಲಕನನ್ನು ಕಟ್ಟಿಹಾಕಿದ್ದಾರೆ.
![MOBILE PHONES LORRY](https://etvbharatimages.akamaized.net/etvbharat/prod-images/8566532_twdfdfdfd.jpeg)
ಇದಾದ ಬಳಿಕ ಲಾರಿಯಲ್ಲಿದ್ದ ಮೊಬೈಲ್ ಮತ್ತೊಂದು ವಾಹನಕ್ಕೆ ಹಾಕಿಕೊಂಡು ಸ್ಥಳದಿಂದ ಅವರು ಪರಾರಿಯಾಗಿದ್ದಾಗಿ ತಿಳಿದು ಬಂದಿದೆ. ಲಾರಿಯಲ್ಲಿ ಒಟ್ಟು 16 ಪೆಟ್ಟಿಗೆಗಳಲ್ಲಿ 15,000 ಸಾವಿರಕ್ಕೂ ಅಧಿಕ ಮೊಬೈಲ್ಗಳಿದ್ದು, 8 ಪೆಟ್ಟಿಗೆಗಳು ಕಳ್ಳತನವಾಗಿವೆ. ಲಾರಿ ಚಾಲಕನ ದೂರಿನನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೊಬೈಲ್ನ ಒಟ್ಟು ಮೌಲ್ಯ 7 ಕೋಟಿ ಎಂದು ತಿಳಿದು ಬಂದಿದೆ.