ETV Bharat / bharat

ಗಸ್ತಿಗೆ ಹೋಗಿದ್ದ ಪೊಲೀಸರ ಮೇಲೆ ಹಲ್ಲೆ.. ಇಬ್ಬರ ಬಂಧನ - ಬುಡಾನ್​ನಲ್ಲಿ ಜನರಿಂದ ಪೊಲೀಸರ ಹಲ್ಲೆ

ಗ್ರಾಮದ ಗಸ್ತಿಗೆ ಹೋಗಿದ್ದ ವೇಳೆ ಇಬ್ಬರು ಪೊಲೀಸರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಬುಡಾನ್​​ ಪ್ರದೇಶದಲ್ಲಿ ನಡೆದಿದೆ.

-injured
ಬ್ಬರ ಬಂಧನ
author img

By

Published : Oct 25, 2020, 1:13 PM IST

ಬುಡಾನ್ (ಉತ್ತರ ಪ್ರದೇಶ): ಕಾಕ್ರಾಲ ಗ್ರಾಮದಲ್ಲಿ ಗಸ್ತಿಗೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಜನರು ಹಲ್ಲೆ ನಡೆಸಿದ್ದಾರೆ. ಇಬ್ಬರು ಕಾನ್ಸ್​ಟೇಬಲ್​ರಿಂದ ಪಿಸ್ತೂಲ್​ ಕಸಿದುಕೊಂಡು, ದೌರ್ಜನ್ಯ ಮೆರೆದಿದ್ದಾರೆ. ಘಟನೆಯಲ್ಲಿ ಓರ್ವ ಕಾನ್ಸ್​ಟೇಬಲ್​ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಪೊಲೀಸರ ಮೇಲೆ ಜನರು ಇಟ್ಟಿಗೆ, ಕಲ್ಲುಗಳಿಗಂದ ಹಲ್ಲೆ ನಡೆಸಿದ್ದು, ಅಧಿಕಾರಿ ಅಶೋಕ್ ಭಧೌರಿಯಾಗೆ ಗಂಭೀರ ಗಾಯಗಳಾಗಿವೆ. ತಡೆಯಲು ಹೋದ ಮತ್ತೊಬ್ಬ ಕಾನ್ಸ್​ಟೇಬಲ್​​ ಒ.ಪಿ. ಸಿಂಗ್ ಬಳಿಯಿದ್ದ ಪಿಸ್ತೂಲ್ ಕಸಿದುಕೊಂಡು ಜನತೆ ಅಟ್ಟಹಾಸ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹಿರಿಯ ಅಧಿಕಾರಿಗಳು, ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಪಿಸ್ತೂಲನ್ನು ಕಸಿದುಕೊಂಡಿದ್ದ ಇಬ್ಬರನ್ನ ಬಂಧಿಸಿ, ತನಿಖೆ ಮುಂದುವರಿಸಿದ್ದೇವೆ ಎಂದು ಬುಡಾನ್ ಎಸ್​ಎಸ್​ಪಿ ಸಂಕಲ್ಪ ಶರ್ಮಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.