ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಅತಿದೊಡ್ಡ ಸಾಧನೆಗೈದಿರುವ ಭಾರತ ಇಂದು ಆ ವಿಚಾರವನ್ನು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿಬಹಿರಂಗಪಡಿಸಿದ್ದಾರೆ.
ಮಿಷನ್ ಶಕ್ತಿ ಯಶಸ್ವಿಯಾಗಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಗೆ ಸಂಪೂರ್ಣ ಕ್ರೆಡಿಟ್ ಸಲ್ಲಬೇಕು ಎಂದಿದ್ದರು. ಭಾಷಣದ ಬಳಿಕ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಿಷನ್ ಶಕ್ತಿಯ ತಂಡಕ್ಕೆ ಶುಭಾಶಯ ಹೇಳಿದ್ದಾರೆ.
#WATCH: PM Narendra Modi interacts with scientists involved with "Mission Shakti"; says, "you have given this message to the world "ki hum bhi kuch kam nahin hai." pic.twitter.com/IJ3Bzo4CbS
— ANI (@ANI) March 27, 2019 " class="align-text-top noRightClick twitterSection" data="
">#WATCH: PM Narendra Modi interacts with scientists involved with "Mission Shakti"; says, "you have given this message to the world "ki hum bhi kuch kam nahin hai." pic.twitter.com/IJ3Bzo4CbS
— ANI (@ANI) March 27, 2019#WATCH: PM Narendra Modi interacts with scientists involved with "Mission Shakti"; says, "you have given this message to the world "ki hum bhi kuch kam nahin hai." pic.twitter.com/IJ3Bzo4CbS
— ANI (@ANI) March 27, 2019
ಇಂದಿನ ಈ ಸಾಧನೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು. ಭಾರತ ಸಾಮರ್ಥ್ಯ ಕಡಿಮೆ ಏನಿಲ್ಲ ಎನ್ನುವುದನ್ನು ನೀವು ಸಾಬೀತುಪಡಿಸಿದ್ದಕ್ಕೆ ಧನ್ಯವಾದ ಎಂದು ಡಿಆರ್ಡಿಒ ವಿಜ್ಞಾನಿಗಳ ತಂಡಕ್ಕೆ ಮೋದಿ ಶುಭಾಶಯ ಹೇಳಿದ್ದಾರೆ.
ಆ್ಯಂಟಿ ಸ್ಯಾಟಲೈಟ್ ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದ್ದು ಇದು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ ಎಂದು ಮೋದಿ ಹೆಮ್ಮೆಯಿಂದ ನುಡಿದಿದ್ದಾರೆ.