ಕಾನ್ಪುರ : ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಸಹಾಯಕ ಶಶಿಕಾಂತ್ ದುಬೆಯ ಪತ್ನಿ ಮನು, ಅಂತಿಮವಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ಬಲೋಲ್ಪುರ್ ಗ್ರಾಮದಲ್ಲಿರುವ ತನ್ನ ಹೆತ್ತವರ ಮನೆಯಲ್ಲಿ ಪತ್ತೆಯಾಗಿದ್ದಾಳೆ.
ಜುಲೈ 3 ರಂದು ಕಾನ್ಪುರದ ಬಿಕ್ರು ಗ್ರಾಮದಲ್ಲಿ ನಡೆದ 8 ಪೊಲೀಸರ ಹತ್ಯೆಯ ಪ್ರತ್ಯಕ್ಷ ಸಾಕ್ಷಿಗಳಲ್ಲಿ ಮನು ಕೂಡ ಒಬ್ಬಳಾಗಿದ್ದಾಳೆ. ಪೊಲೀಸರ ಹತ್ಯಾಕಾಂಡ ನಡೆದ ಮೂರು ಗಂಟೆಯೊಳಗೆ ಮನುವಿನ ಮಾವ ಪ್ರೇಮ್ ಕುಮಾರ್ ಪಾಂಡೆಯನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಆಕೆಯ ಪತಿ ವಿಕಾಸ್ ದುಬೆ ಸಹಾಯಲ ಶಶಿಕಾಂತ್ ದುಬೆಯನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ.
ಪ್ರೇಮ್ ಕುಮಾರ್ ಪಾಂಡೆ ಪೊಲೀಸರನ್ನು ಹತ್ಯೆ ಮಾಡಿದವರಲ್ಲಿ ಒಬ್ಬನಾಗಿದ್ದ ಮತ್ತು ವಿಕಾಸ್ ದುಬೆಯ ಸಹಚರ ಎಂದು ಪೊಲೀಸರು ತಿಳಿಸಿದ್ದಾರೆ. ಪಾಂಡೆಯ ಮನೆ, ನೆಲಸಮವಾದ ವಿಕಾಸ್ ದುಬೆಯ ಮನೆಯಿಂದ ಕೆಲವೇ ಮೀಟರ್ ಅಂತರದಲ್ಲಿದೆ. ಶಶಿಕಾಂತ್ ದುಬೆಯ ಪತ್ನಿ ಮನು, ಪೊಲೀಸರ ಹತ್ಯಾಕಾಂಡ ಬಗ್ಗೆ ತನ್ನ ಅತ್ತಿಗೆಯೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮನು ಆಕೆಯ ತವರು ಮನೆಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ತವರು ಮನೆ ಬಳಿ ನಾವು ಭದ್ರತಾ ಸಿಬ್ಬಂದಿ ನೇಮಿಸಿದ್ದೇವೆ. ಯಾಕೆಂದರೆ ಆಕೆ ಬಿಕ್ರುವಿನಲ್ಲಿ ನಡೆದ ಪೊಲೀಸರ ಹತ್ಯಾಕಾಂಡ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಾಳೆ ಎಂದು ಎಸ್ಪಿ (ಗ್ರಾಮೀಣ) ಬ್ರಿಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.