ಮುಂಬೈ: ಜಗತ್ತಿನ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚಿರುವ ಯುವತಿ ಪಾಸ್ ಆಗಿದ್ದಾಳೆ. ಈ ಮೂಲಕ ತಾನು ಬ್ಯೂಟಿ ವಿತ್ ಬ್ರೈನ್ಸ್ ಎಂಬುದನ್ನು ಸಾಬೀತು ಮಾಡಿದ್ದಾಳೆ.
2016ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿರುವ ಐಶ್ವರ್ಯಾ ಶೆರಾನ್ ಕೇಂದ್ರ ಲೋಕಸೇವಾ ಪರೀಕ್ಷೆಯಲ್ಲೂ ಸಾಧನೆ ತೋರಿದ್ದಾಳೆ. ಈಕೆಯ ಕಠಿಣ ಪರಿಶ್ರಮಕ್ಕೆ ಫಲ ದೊರೆತಿದ್ದು, 93ನೇ ರ‍್ಯಾಂಕ್ ಗಿಟ್ಟಿಸಿಕೊಂಡಿದ್ದಾಳೆ. ಈ ಮೂಲಕ IAS ಅಧಿಕಾರಿಯಾಗುವ ತವಕದಲ್ಲಿದ್ದಾಳೆ.
ತನ್ನ ಸಾಧನೆಯ ಬಗ್ಗೆ ಐಶ್ವರ್ಯಾ ಪ್ರತಿಕ್ರಿಯಿಸಿ, "ನಾನು ಬಾಲಿವುಡ್ ಸಿನಿಮಾ ನಟಿ ಐಶ್ವರ್ಯಾ ರೈ ಅವರಂತೆ ಮಿಸ್ ಇಂಡಿಯಾ ಆಗಬೇಕು ಎಂದು ನನ್ನ ತಾಯಿ ಬಯಸಿ ನನಗೆ ಈ ಹೆಸರಿಟ್ಟಿದ್ದರು. ಅದೇ ರೀತಿ 2016ರಲ್ಲಿ 21 ಮಿಸ್ ಇಂಡಿಯಾ ಫೈನಲಿಸ್ಟ್ ಅಭ್ಯರ್ಥಿಗಳಲ್ಲಿ ಆಯ್ಕೆಯಾಗಿದ್ದೆ. ಮಾಡೆಲಿಂಗ್ ಸಂಬಂಧಿಸಿದ ಇತರೆ ಸ್ಪರ್ಧೆಗಳಲ್ಲೂ ಭಾಗಿಯಾಗಿದ್ದೇನೆ" ಎಂದು ಹೇಳಿದ್ದಾರೆ.
-
Aishwarya Sheoran, Femina Miss India 2016 finalist, Campus Princess Delhi 2016, Freshface winner Delhi 2015 made us immensely proud as she scored the All India Rank 93 in the Civil Services Examination. A huge congratulations to her on this achievement!#AishwaryaSheoran #CSE pic.twitter.com/SrDu4iK6T0
— Miss India (@feminamissindia) August 4, 2020 " class="align-text-top noRightClick twitterSection" data="
">Aishwarya Sheoran, Femina Miss India 2016 finalist, Campus Princess Delhi 2016, Freshface winner Delhi 2015 made us immensely proud as she scored the All India Rank 93 in the Civil Services Examination. A huge congratulations to her on this achievement!#AishwaryaSheoran #CSE pic.twitter.com/SrDu4iK6T0
— Miss India (@feminamissindia) August 4, 2020Aishwarya Sheoran, Femina Miss India 2016 finalist, Campus Princess Delhi 2016, Freshface winner Delhi 2015 made us immensely proud as she scored the All India Rank 93 in the Civil Services Examination. A huge congratulations to her on this achievement!#AishwaryaSheoran #CSE pic.twitter.com/SrDu4iK6T0
— Miss India (@feminamissindia) August 4, 2020
ಇದೇ ವಿಷಯಕ್ಕೆ ಸಂಬಂಧಿಸಿದಂತೆ 'ಮಿಸ್ ಇಂಡಿಯಾ' ಟ್ವೀಟ್ ಮಾಡಿದ್ದು, 2016ರ ಮಿಸ್ ಇಂಡಿಯಾ ಫೈನಲಿಸ್ಟ್ ಇದೀಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ 93ನೇ ಸ್ಥಾನ ಪಡೆದುಕೊಂಡಿದ್ದಾರೆ. ಐಶ್ವರ್ಯಾ ಶೆರಾನ್‌ಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
"ನನಗೆ ಮೊದಲಿನಿಂದಲೂ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸಿತ್ತು. ಅದಕ್ಕಾಗಿ ಯಾವುದೇ ರೀತಿಯ ವಿಶೇಷ ಕೋಚಿಂಗ್ ತೆಗೆದುಕೊಂಡಿಲ್ಲ. ಬಿಡುವಿನ ಸಮಯದಲ್ಲಿ ಅಧ್ಯಯನ ಮಾಡುತ್ತಿದ್ದೆ" ಎಂದು ತಿಳಿಸಿದ್ದಾರೆ.
ಇವರ ತಂದೆ ಕರ್ನಲ್ ಅಜಯ್ ಕುಮಾರ್ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ತೆಲಂಗಾಣ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.