ETV Bharat / bharat

ಅಪ್ರಾಪ್ತೆಯ ಅಪಹರಿಸಿ ಸಾಮೂಹಿಕ ಅತ್ಯಾಚಾರ - ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ಅಪ್ರಾಪ್ತೆಯೋರ್ವಳು ತನ್ನ ಮನೆಯ ಹತ್ತಿರದ ಪ್ರದೇಶವೊಂದಕ್ಕೆ ತೆರಳುತ್ತಿದ್ದಾಗ ಮೂವರು ಕಾಮುಕರು ಆಕೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

Minor girl abducted, gang-raped in Jaipur; 3 held
ಮತ್ತೊಂದು ನಾಚಿಕೆಗೇಡಿನ ಸಂಗತಿ; ಅಪ್ರಾಪ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ
author img

By

Published : Oct 1, 2020, 7:14 AM IST

ಜೈಪುರ: ಇಲ್ಲಿನ ಅಮೆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಂಡಿಪೋರಾ ಗ್ರಾಮದಲ್ಲಿ ಮೂವರು ಕಾಮುಕರು ಅಪ್ರಾಪ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಆರೋಪಿಗಳನ್ನು ಕಲು, ವಿಕ್ರಮ್ ಮತ್ತು ಜೀತು ಎಂದು ಗುರುತಿಸಲಾಗಿದ್ದು, ಈ ಮೂವರು ಒಂದೇ ಪ್ರದೇಶದವರಾಗಿದ್ದಾರೆ. ಅಮೆರ್​ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.

ಅಪ್ರಾಪ್ತೆಯ ಅಪಹರಿಸಿ ಸಾಮೂಹಿಕ ಅತ್ಯಾಚಾರ

ಮೂಲಗಳ ಪ್ರಕಾರ, ಅಪ್ರಾಪ್ತೆ ತನ್ನ ಮನೆಯ ಹತ್ತಿರ ಪ್ರದೇಶವೊಂದಕ್ಕೆ ತೆರಳುತ್ತಿದ್ದಾಗ ಈ ಮೂರು ಕಾಮುಕರು ಆಕೆಯನ್ನು ಅಪಹರಿಸಿದ್ದಾರೆ. ಬಳಿಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರಕ್ಕೊಳಗಾಗಿ ತನ್ನ ಮನೆಗೆ ವಾಪಸಾದಾಗ ನಡೆದ ವಿಷಯವನ್ನು ಪೋಷಕರ ಬಳಿ ತಿಳಿಸಿದ್ದಾಳೆ.

ಬಳಿಕ ಸಂತ್ರಸ್ತೆಯ ತಂದೆ ಮೂವರ ವಿರುದ್ಧ ಆಮೆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.