ETV Bharat / bharat

FCRA: ಮೇ 31ರ ವರೆಗೆ ನೋಂದಣಿ ಪ್ರಮಾಣ ಪತ್ರಗಳ ಮಾನ್ಯತೆ ದಿನಾಂಕ ವಿಸ್ತರಣೆ

author img

By

Published : Jan 15, 2021, 1:09 PM IST

ಕೇಂದ್ರ ಗೃಹ ಸಚಿವಾಲಯವು ತನ್ನ ಇತ್ತೀಚಿನ ಅಧಿಸೂಚನೆಯಲ್ಲಿ ಎಫ್‌ಸಿಆರ್‌ಎ ಅನ್ನು ಕಡ್ಡಾಯಗೊಳಿಸಿದ್ದು, ಇದೀಗ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ 2010ರ ಅಡಿ ನೀಡಲಾದ ನೋಂದಣಿ ಪ್ರಮಾಣ ಪತ್ರಗಳ ಮಾನ್ಯತೆ ದಿನಾಂಕವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

Ministry of Home Affair
Ministry of Home Affair

ನವದೆಹಲಿ: ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) 2010 ರ ಅಡಿ ನೀಡಲಾದ ನೋಂದಣಿ ಪ್ರಮಾಣ ಪತ್ರಗಳ ಮಾನ್ಯತೆಯ ದಿನಾಂಕವನ್ನು 2021 ಮೇ 31 ರ ವರೆಗೆ ಗೃಹ ಸಚಿವಾಲಯ ವಿಸ್ತರಿಸಿದೆ.

ಕೇಂದ್ರ ಗೃಹ ಸಚಿವಾಲಯವು ತನ್ನ ಇತ್ತೀಚಿನ ಅಧಿಸೂಚನೆಯಲ್ಲಿ ಎಫ್‌ಸಿಆರ್‌ಎ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಎಫ್‌ಸಿಆರ್‌ಎ ಕಾಯ್ದೆಯ ಸೆಕ್ಷನ್ 12 (6) ಅಡಿ ನೀಡಿರುವ ಪ್ರಮಾಣಪತ್ರವು ಐದು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ ನೋಂದಣಿ ಮಾಡಿದ ಸಂಸ್ಥೆ ಅಥವಾ ಎನ್​ಜಿಒಗಳು ವಿದೇಶದಿಂದ ದೇಣಿಗೆ ಸಂಗ್ರಹಿಸಿ, ಅದರ ವಿವರಗಳನ್ನು ಸಲ್ಲಿಸಬೇಕು.

ಇದೀಗ 2020 ರ ಸೆಪ್ಟೆಂಬರ್ 29 ರಿಂದ 2021 ರ ಮೇ 31ರ ಅವಧಿ ಒಳಗೆ ಮುಗಿಯುವ ನೋಂದಣಿ ಪ್ರಮಾಣಪತ್ರಗಳು 2021ರ ಮೇ 31 ರವರೆಗೆ ಮಾನ್ಯವಾಗಿರುತ್ತವೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.