ಚೆನ್ನೈ: ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಸಿಎಂ ಕೂಡ ದಿನಕ್ಕೆ ಎರಡೇ ಬಕೆಟ್ ನೀರು ಬಳಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತಮಿಳಿಗರು ನೀರಿಲ್ಲದೆ ಒದ್ದಾಡುತ್ತಿದ್ದರೂ ಸಚಿವರ ಮನೆಗಳಿಗೆ ದಿನಕ್ಕೆ 2 ಟ್ಯಾಂಕರ್ ನೀರು ಪೂರೈಕೆಯಾಗ್ತಿದೆ ಎಂಬುದನ್ನು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಲ್ಲಗಳೆದರು. ತಮಗೂ ಎಲ್ಲರಂತೆ ನೀರು ಪೂರೈಕೆಯಾಗ್ತಿದೆ ಎಂದರು.
ಕಳೆದ ಎರಡು ತಿಂಗಳಿನಿಂದ ನಮ್ಮ ಮನೆಯಲ್ಲಿ 2 ಟ್ಯಾಂಕರ್ ನೀರು ಪೂರೈಕೆಯಾಗಿದೆ. ಕುಡಿಯಲು ನಾಲ್ಕು ಲೀಟರ್ ಹಾಗೂ ದಿನಕ್ಕೆ 2 ಬಕೆಟ್ ನೀರು ಮಾತ್ರ ಬಳಸುತ್ತಿದ್ದೇನೆ. ಜನರು ಸಹ ನೀರನ್ನು ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಶಾಲೆ, ಹಾಸ್ಟೆಲ್ಗಳಿಗೆ ಸಾಕಾಗುವಷ್ಟು ನೀರು ಪೂರೈಕೆಯಾಗ್ತಿದೆ ಎಂದರು. ಅಲ್ಲದೆ, ನೀರು ಪೂರೈಕೆ ಮಾಡುವ ಲಾರಿಗಳ ಸಂಖ್ಯೆ ಕಡಿಮೆಯಿದ್ದು, ಕೂಡಲೆ ಲಾರಿ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತೇನೆ. ಕೆಲ ಟ್ಯಾಂಕರ್ಗಳು ಹೆಚ್ಚು ಹಣ ಪಡೆಯುತ್ತಿದ್ದು, ನಿರ್ದಿಷ್ಟ ಹಣ ವಿಧಿಸಲಾಗುತ್ತೆ ಎಂದರು.
ಕೆಲವರು ಆನ್ಲೈನ್ ಮೂಲಕ 10 ಟ್ಯಾಂಕರ್ ನೀರನ್ನು ಬುಕ್ ಮಾಡುತ್ತಿದ್ದು, ಇದು ಸ್ವಾರ್ಥವಾಗಿದೆ. ನಮ್ಮ ಮೊದಲ ಆದ್ಯತೆ ಬಡವರು. ಅವರಿಗೂ ಸಮರ್ಪಕವಾಗಿ ನೀರು ಸಿಗುವಂತೆ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದರು.