ETV Bharat / bharat

ದಡಾರ​ ಲಸಿಕೆಗೆ ಕೋವಿಡ್​ ಅಡ್ಡಿ; 117 ಮಿಲಿಯನ್​ ಮಕ್ಕಳಿಗೆ ಅಪಾಯ ಸಾಧ್ಯತೆ - ಜೀವರಕ್ಷಕ ಲಸಿಕಾ ಅಭಿಯಾನ

ಕೊರೊನಾ ಸಂಕಷ್ಟದ ಕಾರಣದಿಂದ ಹಲವಾರು ದೇಶಗಳಲ್ಲಿ ದಡಾರ ಲಸಿಕೆ ಹಾಕುವ ಕಾರ್ಯಕ್ರಮ ಸ್ಥಗಿತವಾಗಿದ್ದು, 37 ರಾಷ್ಟ್ರಗಳಲ್ಲಿನ 117 ಮಕ್ಕಳು ದಡಾರ್ ಲಸಿಕೆ ವಂಚಿತರಾಗುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಎಚ್ಚರಿಕೆ ನೀಡಿವೆ.

Millions of children at risk of Measles
Millions of children at risk of Measles
author img

By

Published : Apr 15, 2020, 12:44 PM IST

Updated : Apr 15, 2020, 1:21 PM IST

ನ್ಯೂಯಾರ್ಕ್​: ಕೋವಿಡ್​-19 ಮಹಾಮಾರಿ ಕಾರಣದಿಂದ ವಿಶ್ವದ 117 ಮಿಲಿಯನ್​ ಮಕ್ಕಳು ದಡಾರ ಲಸಿಕೆಯಿಂದ ವಂಚಿತರಾಗಲಿದ್ದು, ಇವರೆಲ್ಲರಿಗೂ ದಡಾರ​ ಕಾಯಿಲೆ ಬರುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಎಚ್ಚರಿಕೆ ನೀಡಿವೆ.

ಕೊರೊನಾ ಸಂಕಷ್ಟದ ಕಾರಣದಿಂದ 24 ದೇಶಗಳಲ್ಲಿ ದಡಾರ ಲಸಿಕೆ ಹಾಕುವ ಕಾರ್ಯಕ್ರಮ ಸ್ಥಗಿತವಾಗಿದೆ. ಇನ್ನೂ ಹಲವಾರು ರಾಷ್ಟ್ರಗಳು ಲಸಿಕಾ ಅಭಿಯಾನವನ್ನು ಮುಂದೂಡಲಿವೆ. ಇದರಿಂದಾಗಿ 37 ರಾಷ್ಟ್ರಗಳಲ್ಲಿನ 117 ಮಕ್ಕಳು ಈ ಬಾರಿ ದಡಾರ ಲಸಿಕೆ ವಂಚಿತರಾಗುವ ಸಾಧ್ಯತೆಗಳಿವೆ ಎಂದು ಮೀಸಲ್ಸ್ ಮತ್ತು ರುಬೆಲ್ಲಾ ಇನಿಶಿಯೇಟಿವ್ (M&RI), ರೆಡ್​ ಕ್ರಾಸ್​ ಸೊಸೈಟಿ, ಯುನಿಸೆಫ್​ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೋವಿಡ್​-19 ಸಂಕಷ್ಟದ ಮಧ್ಯೆಯೂ ಆಯಾ ರಾಷ್ಟ್ರಗಳು ಜೀವರಕ್ಷಕ ಲಸಿಕಾ ಅಭಿಯಾನಗಳನ್ನು ಎಂದಿನಂತೆ ಮುಂದುವರೆಸಬೇಕಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಸಮುದಾಯದ ಜನರ ಆರೋಗ್ಯದ ರಕ್ಷಣಾ ಕ್ರಮಗಳನ್ನು ಅನುಸರಿಸಿ ಲಸಿಕಾ ಕಾರ್ಯಕ್ರಮಗಳನ್ನು ಮುಂದುವರೆಸುವುದು ಸೂಕ್ತ. ಒಂದೊಮ್ಮೆ ನಿರ್ದಿಷ್ಟ ಪ್ರದೇಶಗಳಲ್ಲಿ ಕೋವಿಡ್​ ಸಮಸ್ಯೆ ವಿಪರೀತವಾಗಿದ್ದು, ಲಸಿಕೆ ಹಾಕಲಾಗದಿದ್ದರೆ ಎಷ್ಟು ಮಕ್ಕಳು ಲಸಿಕೆ ವಂಚಿತರಾಗಿದ್ದಾರೆ ಎಂಬ ಬಗ್ಗೆ ನಿಖರ ಅಂಕಿ-ಅಂಶಗಳನ್ನು ದಾಖಲಿಸಬೇಕೆಂದು ಹೇಳಲಾಗಿದೆ.

Last Updated : Apr 15, 2020, 1:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.