ಅವಂತಿಪುರ್(ಜಮ್ಮು-ಕಾಶ್ಮೀರ್): ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿನ ಅವಂತಿಪುರ್ದಲ್ಲಿ ಬೆಳ್ಳಂಬೆಳಗ್ಗೆ ಉಗ್ರರು- ಭಾರತೀಯ ಯೋಧರ ನಡುಗೆ ಗುಂಡಿನ ಕಾಳಗ ನಡೆದಿದ್ದು, ಒಬ್ಬ ಉಗ್ರನ ಸದೆಬಡಿಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಉಗ್ರರು ಅಡಗಿ ಕುಳಿತಿದ್ದ ಖಚಿತ ಮಾಹಿತಿ ಪಡೆದುಕೊಂಡ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ ವೇಳೆ ಓರ್ವ ಉಗ್ರ ಸಾವನ್ನಪ್ಪಿದ್ದಾನೆ. ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದಾಗಿ ಯೋಧರು ಮಾಹಿತಿ ನೀಡಿದ್ದಾರೆ.
ಕೆಲ ದಿನಗಳಿಂದ ಗಡಿ ಪ್ರದೇಶಗಳಲ್ಲಿ ಭಾರತೀಯ ಯೋಧರು - ಉಗ್ರರ ನಡುವೆ ನಿರಂತರ ಗುಂಡಿನ ಕಾಳಗ ನಡೆಯುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ನಡೆದ ಗುಂಡಿನ ಕಾಳಗದಲ್ಲಿ ಕರ್ನಲ್ ಅಶುತೋಷ್ ಶರ್ಮಾ, ಕರ್ನಲ್ ಹಾಗೂ ಲ್ಯಾನ್ಸ್ ನಾಯ್ಕ್ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದರು. ಇದರ ಮರುದಿನವೇ ಮತ್ತೆ ಮೂವರು ಯೋಧರು ಉಗ್ರರ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದರು.