ETV Bharat / bharat

ಶ್ರಮಿಕ್​ ರೈಲಿನ ಶೌಚಾಲಯದಲ್ಲಿ ವಲಸೆ ಕಾರ್ಮಿಕನ ಶವ ಪತ್ತೆ! - ವಲಸೆ ಕಾರ್ಮಿಕ

ವಲಸೆ ಕಾರ್ಮಿಕರ ಬಿಕ್ಕಟ್ಟಿನ ನಡುವೆ ಉತ್ತರ ಪ್ರದೇಶದ 38 ವರ್ಷದ ವಲಸೆ ಕಾರ್ಮಿಕನೊಬ್ಬನ ಶವ ಶ್ರಮಿಕ್ ರೈಲಿನ ಶೌಚಾಲಯದಲ್ಲಿ ಪತ್ತೆಯಾಗಿದೆ.

migrant worker
migrant worker
author img

By

Published : May 30, 2020, 12:07 PM IST

ಲಕ್ನೋ (ಉ.ಪ್ರ): ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ 'ಶ್ರಮಿಕ್ ಸ್ಪೆಷಲ್' ರೈಲಿನ ಶೌಚಾಲಯದಲ್ಲಿ ವಲಸೆ ಕಾರ್ಮಿಕನೊಬ್ಬನ ಶವ ಪತ್ತೆಯಾಗಿದೆ.

ರೈಲ್ವೆ ಸಿಬ್ಬಂದಿ ರೈಲಿನ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾಗ ಶವ ಪತ್ತೆಯಾಗಿದೆ. ಮೃತ ಕಾರ್ಮಿಕನನ್ನು ರಾಜ್ಯದ ಬಸ್ತಿ ಜಿಲ್ಲೆಯ ನಿವಾಸಿ 38 ವರ್ಷದ ಮೋಹನ್ ಲಾಲ್ ಶರ್ಮಾ ಎಂದು ಗುರುತಿಸಲಾಗಿದೆ.

ಝಾನ್ಸಿ-ಗೋರಖ್‌ಪುರ ರೈಲು ಮೇ 23ರಂದು ಹೊರಟು ಮೇ 24ರಂದು ಗೋರಖ್‌ಪುರ ತಲುಪಿತು. ಬಳಿಕ ಪ್ರೋಟೋಕಾಲ್ ಪ್ರಕಾರ ಮೇ 27ರಂದು ರೈಲಿನ ನಿರ್ವಹಣೆ ಮತ್ತು ನೈರ್ಮಲ್ಯೀಕರಣಕ್ಕಾಗಿ ಝಾನ್ಸಿಗೆ ಕಳುಹಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ವ್ಯಕ್ತಿ ಮುಂಬೈನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಅವರ ಕುಟುಂಬದವರು ಹೇಳಿದ್ದಾರೆ. ಅವರ ಆಧಾರ್ ಕಾರ್ಡ್, ಗೋರಖ್‌ಪುರಕ್ಕೆ ಹೋಗುವ ರೈಲಿನ ಟಿಕೆಟ್, ಕೆಲವು ದಾಖಲೆಗಳು ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಝಾನ್ಸಿಯ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.