ETV Bharat / bharat

ನ್ಯಾಯಾಲಯಗಳಿಗೆ ವಿವಾದಗಳ ಪ್ರವಾಹವೇ ಹರಿದು ಬರಲಿವೆ:ನೀತಿ ಆಯೋಗದ ಸಿಇಒ - ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್

ಆನ್‌ಲೈನ್ ವಿವಾದ ಪರಿಹಾರ (ಒಡಿಆರ್) ವ್ಯವಸ್ಥೆಯು ಉದ್ಭವಿಸಬಹುದಾದ ಸಮಸ್ಯೆಗೆ ತ್ವರಿತ ಪರಿಹಾರವನ್ನು ಒದಗಿಸುತ್ತದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.

NITI Aayog CEO
ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್
author img

By

Published : Jun 28, 2020, 7:32 PM IST

ನವದೆಹಲಿ: ಮುಂಬರುವ ತಿಂಗಳುಗಳಲ್ಲಿ ಸಾಲ, ಆಸ್ತಿ, ವಾಣಿಜ್ಯ ಮತ್ತು ಚಿಲ್ಲರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ವಿವಾದಗಳ ಪ್ರವಾಹ ಉಂಟಾಗಬಹುದು ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.

ಭಾರತೀಯ ವಿವಾದ ಪರಿಹಾರ ಕೇಂದ್ರವು ಆಯೋಜಿಸಿದ್ದ 'ಆನ್‌ಲೈನ್ ವಿವಾದ ಪರಿಹಾರ - ಅವಕಾಶಗಳು ಮತ್ತು ಸವಾಲುಗಳು' ಎಂಬ ವಿಷಯ ಕುರಿತ ವೆಬ್‌ನಾರ್​ನಲ್ಲಿ ಭಾಷಣ ಮಾಡಿದ ಅಮಿತಾಭ್ ಕಾಂತ್, ಆನ್‌ಲೈನ್ ವಿವಾದ ಪರಿಹಾರ (ಒಡಿಆರ್) ವ್ಯವಸ್ಥೆಯು ಉದ್ಭವಿಸಬಹುದಾದ ಸಮಸ್ಯೆಗೆ ತ್ವರಿತ ಪರಿಹಾರವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.

ಪಚಾರಿಕ ನ್ಯಾಯಾಲಯ ವ್ಯವಸ್ಥೆಯ ಹೊರಗಿನ ವಿವಾದಗಳನ್ನು ಕೈಗೆಟುಕುವ ಮತ್ತು ತ್ವರಿತ ರೀತಿಯಲ್ಲಿ ಪರಿಹರಿಸುವ ಕಾರ್ಯವಿಧಾನವಾಗಿ ಆನ್​ಲೈನ್ ವಿಧಾನವನ್ನು ಬಳಸಬಹುದು. ಕೋವಿಡ್-19 ಸಾಂಕ್ರಾಮಿಕವು ನಾವು ಹೇಗೆ ಕಾರ್ಯನಿರ್ವಹಿಸುತ್ತೇವೆ ಮತ್ತು ಏಕೆ ಎಂಬ ಬಗ್ಗೆ ನಮ್ಮನ್ನು ಎಚ್ಚರಿಸಿದೆ. ಇದೊಂದು ದೊಡ್ಡ ಸವಾಲಾಗಿದ್ದು ನಾವೆಲ್ಲರು ಒಟ್ಟಿಗೆ ಹೋರಾಡಬೇಕಿದೆ. ಹೆಚ್ಚು ದುರ್ಬಲರು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಲಭ್ಯವಿರುವ ಯಾವುದೇ ಅವಕಾಶವನ್ನು ನಾವು ಬಳಸುವುದು ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ.

ಹೆಚ್ಚಿನ ಸಣ್ಣ ಮತ್ತು ಮಧ್ಯಮ ವಿವಾದಗಳನ್ನು ನ್ಯಾಯಾಲಯಕ್ಕೆ ಕೊಡೊಯ್ಯದೆ ಪರಿಹರಿಸಬಹುದು. ಇದರಿಂದಾಗಿ ನ್ಯಾಯಾಲಯಗಳು ಹೆಚ್ಚು ಸಂಕೀರ್ಣವಾದ ಪ್ರಕರಣಗಳು ಅಥವಾ ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.