ETV Bharat / bharat

ಮತ್ತೆ ಮಿಗ್‌ 21 ತರಬೇತಿ ಯುದ್ದವಿಮಾನ ಪತನ; ಪ್ರಾಣಾಪಾಯದಿಂದ ಪಾರಾದ ಸಿಬ್ಬಂದಿ - ಗ್ವಾಲಿಯರ್​ನಲ್ಲಿ ಮಿಗ್ ಪತನ

ವಾಯುಸೇನೆಯ ತರಬೇತಿ ವಿಮಾನ ಪತನದ ವೇಳೆ ಗ್ರೂಪ್ ಕ್ಯಾಪ್ಟನ್ ಹಾಗೂ ಸ್ಕ್ವಾಡ್ರನ್ ಲೀಡರ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಿಗ್ 21 ಯುದ್ಧವಿಮಾನ ಪತನ
author img

By

Published : Sep 25, 2019, 12:49 PM IST

Updated : Sep 25, 2019, 3:26 PM IST

ಗ್ವಾಲಿಯರ್(ಮಧ್ಯಪ್ರದೇಶ): ರಷ್ಯಾ ನಿರ್ಮಿತ ಮಿಗ್ - 21 ತರಬೇತಿ ಯುದ್ಧ ವಿಮಾನ ಗ್ವಾಲಿಯರ್​ನಲ್ಲಿ ಪತನವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ದುರ್ಘಟನೆ ವೇಳೆ ಗ್ರೂಪ್ ಕ್ಯಾಪ್ಟನ್ ಹಾಗೂ ಸ್ಕ್ವಾಡ್ರನ್ ಲೀಡರ್ ಇಬ್ಬರೂ ಪ್ಯಾರಾಚೂಟ್ ಮೂಲಕ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಮಿಗ್ 21 ಯುದ್ಧವಿಮಾನ ಗ್ವಾಲಿಯರ್​ನ ಗದ್ದೆ ಇರುವ ಪ್ರದೇಶದಲ್ಲಿ ಬಿದ್ದಿದೆ.

ಮಿಗ್ 21 ಪತನದ ಇತಿಹಾಸ:

ಮಿಗ್ 21 ಯುದ್ಧ ವಿಮಾನವನ್ನು 1963 ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆ ಮಾಡಲಾಗಿತ್ತು. ಈ ವೇಳೆ ಸುಮಾರು 1200 ಮಿಗ್ ಫೈಟರುಗಳನ್ನು ರಷ್ಯಾ ಜೊತೆಗಿನ ರಕ್ಷಣಾ ಒಪ್ಪಂದ ಪ್ರಕಾರ, ಸೇನೆಗೆ ಸೇರಿಸಲಾಗಿದೆ. 2019 ರವರೆಗೆ 113 ಫೈಟರ್‌ ಜೆಟ್‌ಗಳು ವಾಯುಸೇನೆಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಆದ್ರೆ, ಈ ಯುದ್ದ ವಿಮಾನ ಸಾಕಷ್ಟು ತಾಂತ್ರಿಕ ತೊಂದರೆ ಎದುರಿಸುತ್ತಿದ್ದು 1970 ರಿಂದ ಇಲ್ಲಿಯವರೆಗೆ ಭಾರತದ 170 ಮಂದಿ ಪೈಲೆಟ್‌ಗಳು ಹಾಗು 40 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

2010 ರಿಂದ 2013 ರ ವರೆಗೆ 14 ಮಿಗ್ 21 ವಿಮಾನಗಳು ಪತನವಾಗಿವೆ. ಇನ್ನು ಅಚ್ಚರಿ ಅಂದ್ರೆ, 1966 ರಿಂದ 1984 ರ ನಡುವೆ ನಿರ್ಮಾಣಗೊಂಡ 840 ಏರ್‌ಕ್ರಾಫ್ಟ್‌ಗಳಲ್ಲಿ ಸುಮಾರು ಅರ್ಧದಷ್ಟು ಪತನವಾಗಿದ್ದು ಸಾವುನೋವಿಗೆ ಕಾರಣವಾಗಿವೆ.

Intro:Body:

ಮಿಗ್ 21 ಯುದ್ಧವಿಮಾನ ಪತನ... 

ಗ್ವಾಲಿಯರ್(ಮಧ್ಯಪ್ರದೇಶ): ಮಿಗ್ - 21 ತರಬೇತಿ ಯುದ್ಧವಿಮಾನವೊಂದು ಗ್ವಾಲಿಯರ್​ನಲ್ಲಿ ಪತನವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ವಿಮಾನ ಪತನದ ವೇಳೆ ಗ್ರೂಪ್ ಕ್ಯಾಪ್ಟನ್ ಹಾಗೂ ಸ್ಕ್ವಾಡ್ರನ್ ಲೀಡರ್ ಇಬ್ಬರೂ ಪ್ರಾಣ ಉಳಿಸಿಕೊಂಡಿದ್ದಾರೆ.

ಮಿಗ್ 21 ಯುದ್ಧವಿಮಾನ ಗ್ವಾಲಿಯರ್​ನ ಗದ್ದೆ ಪ್ರದೇಶದಲ್ಲಿ ಪತನವಾಗಿದೆ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.

Conclusion:
Last Updated : Sep 25, 2019, 3:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.