ETV Bharat / bharat

ನವ ಕೋವಿಡ್-‌19 ಪರೀಕ್ಷೆ.. ಮೈಕ್ರೊಸಾಫ್ಟ್‌, ಅಡಾಪ್ಟಿವ್‌ ತಂಡದಿಂದ ನೈಜ ಅಧ್ಯಯನ ಶುರು.. - ಇಮ್ಯೂನ್‌ರೇಸ್ ನೈಜ ಚಿಕಿತ್ಸಾ ಪರೀಕ್ಷೆಗಳ ಅಧ್ಯಯನ

ಈಗ ಮೈಕ್ರೊಸಾಫ್ಟ್‌ ಮತ್ತು ಅಡಾಪ್ಟಿವ್‌ ಸಂಸ್ಥೆಗಳು ಮೂರನೇ ರೀತಿಯ ಪರೀಕ್ಷೆಯ ಸಾಧ್ಯತೆ ಕುರಿತು ಭರವಸೆ ಹೊಂದಿವೆ. ಈ ರೀತಿಯ ಪರೀಕ್ಷೆಯು ಸದ್ಯ ಇರುವ ಪರೀಕ್ಷಾ ಸವಾಲುಗಳಿಗೆ ಯಶಸ್ವಿ ಉತ್ತರವಾಗಬಲ್ಲದು ಎನ್ನಲಾಗಿದೆ.

Microsoft, Adaptive team up to launch virtual study for new COVID-19 test
ನವ ಕೋವಿಡ್-‌19 ಪರೀಕ್ಷೆ
author img

By

Published : May 14, 2020, 1:57 PM IST

ವಾಷಿಂಗ್ಟನ್‌ (ಯುಎಸ್‌ಎ): ಹೆಚ್ಚು ವಿಶ್ವಾಸಾರ್ಹ ಕೋವಿಡ್‌-19 ಪರೀಕ್ಷೆಗಳನ್ನು ನಡೆಸಬೇಕೆಂಬ ಬೇಡಿಕೆಯನ್ನು ಈಡೇರಿಸಲು ನೆರವಾಗುವ ಪ್ರಯತ್ನದ ಅಂಗವಾಗಿ ತಂತ್ರಜ್ಞಾನ ದೈತ್ಯ ಮೈಕ್ರೊಸಾಫ್ಟ್‌ ಕಂಪನಿಯು ಅಡಾಪ್ಟಿವ್‌ ಬಯೋಟೆಕ್ನಾಲಜೀಸ್‌ ಸಹಯೋಗದೊಂದಿಗೆ “ಇಮ್ಯೂನ್‌ರೇಸ್”‌ ಹೆಸರಿನಲ್ಲಿ ನೈಜ ಚಿಕಿತ್ಸಾ ಪರೀಕ್ಷೆಗಳ ಅಧ್ಯಯನವನ್ನು ಪ್ರಾರಂಭಿಸಲಿದೆ ಎಂಬ ಅಧಿಕೃತ ಹೇಳಿಕೆ ಮಂಗಳವಾರ ಹೊರ ಬಿದ್ದಿದೆ.

ಕೋವಿಡ್‌-19 ವೈರಸ್‌ಗೆ ರೋಗನಿರೋಧಕ ವ್ಯವಸ್ಥೆಯ ಪ್ರತಿಕ್ರಿಯೆಯನ್ನು ಕ್ಷಿಪ್ರವಾಗಿ ದಾಖಲಿಸುವುದು ಮತ್ತು ಅಳೆಯುವ ವಿಸ್ತೃತ ಪ್ರಯತ್ನದ ಅಂಗವಾಗಿ ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಇನ್ನೂ ಹೆಚ್ಚು ವಿಶ್ವಾಸಾರ್ಹ ಪರೀಕ್ಷೆಯನ್ನು ನಡೆಸುವ ಅವಶ್ಯಕತೆಯನ್ನು ಈಡೇರಿಸಿದಂತಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕೋವಿಡ್‌-19ರಿಂದ ಬಾಧಿತರಾದ 1000 ಜನರು ಸದರಿ ಅಧ್ಯಯನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ರಕ್ತದಲ್ಲಿರುವ ಟಿ ಜೀವಕೋಶಗಳು ಎಂದು ಕರೆಯಲಾಗುವ ರೊಗನಿರೋಧಕ ವ್ಯವಸ್ಥೆಯ ವಿಶೇಷ ಜೀವಕೋಶಗಳನ್ನು ಅಳೆಯಲಾಗುತ್ತದೆ. ಯಾವುದೇ ರೋಗವಿರಲಿ, ಅದನ್ನು ಮೊದಲು ಗುರುತಿಸುವ ಟಿ ಜೀವಕೋಶಗಳು ದೊಡ್ಡ ಸಂಖ್ಯೆಯಲ್ಲಿ ಉತ್ಪತ್ತಿಯಾಗುವ ಮೂಲಕ ಸೋಂಕನ್ನು ಎದುರಿಸುತ್ತವೆ. ವಿವಿಧ ರೋಗಗಳಿಗೆ ಟಿ ಜೀವಕೋಶಗಳು ತೋರುವ ಈ ರೋಗನಿರೋಧಕ ಪ್ರತಿಕ್ರಿಯೆಯನ್ನು ದಾಖಲಿಸುವ ಮತ್ತು ಅಳೆಯುವ ಕೆಲಸಕ್ಕೆ ಅಡಾಪ್ಟಿವ್‌ ಮತ್ತು ಮೈಕ್ರೊಸಾಫ್ಟ್‌ ಕಂಪನಿಗಳು ಮುಂದಾಗಿವೆ.

ವಿವಿಧ ರೋಗಗಳಿಗೆ ಟಿ ಜೀವಕೋಶಗಳು ತೋರುವ ರೋಗನಿರೋಧಕ ಪ್ರಕ್ರಿಯೆಯ ಸಂಯುಕ್ತ ಸಾಮರ್ಥ್ಯಗಳನ್ನು ಕೋವಿಡ್‌-19 ಸೋಂಕಿನ ವಿರುದ್ಧ ಬಳಸಲಾಗುವುದು ಎಂದು ಸಂಸ್ಥೆಗಳ ಪ್ರಕಟಣೆ ಹೇಳಿದೆ. “ಕೋವಿಡ್‌-19 ವಿರುದ್ಧ ಪರಿಹಾರ ಕಂಡು ಹಿಡಿಯುವ ಪ್ರಯತ್ನಕ್ಕೆ ನಾವು ಬದ್ಧರಾಗಿದ್ದೇವೆ. ಕೋವಿಡ್‌- 19ನಿಂದ ಬಾಧಿತರಾದವರು ಯಾರೇ ಇರಲಿ, ಈ ವೈರಸ್‌ ನಿಯಂತ್ರಿಸುವ ಹಾಗೂ ನಿರ್ವಹಿಸುವ ಮಹತ್ವದ ಮಾಹಿತಿ ಅವರ ದೇಹ ಹೊಂದಿರುತ್ತದೆ,” ಎನ್ನುತ್ತಾರೆ ಮೈಕ್ರೊಸಾಫ್ಟ್‌ನ ಕೃತಕ ಬುದ್ಧಿಮತ್ತೆ ಮತ್ತು ಸಂಶೋಧನೆಯ ಕಾರ್ಪೊರೇಟ್‌ ಉಪಾಧ್ಯಕ್ಷ ಪೀಟರ್‌ ಲೀ.

ಹೀಗೆ ಗುರುತಿಸಲಾದ ದತ್ತಾಂಶವನ್ನು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು, ಶೈಕ್ಷಣಿಕ ಮತ್ತು ಕೈಗಾರಿಕಾ ವಲಯಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲಾಗುವುದು ಎಂದು ಕಂಪನಿಗಳು ಹೇಳಿವೆ. ಇದರಿಂದ ಈ ಸಾಂಕ್ರಾಮಿಕಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಗೆ ವೇಗ ಸಿಗಲಿದೆ. ಕೋವಿಡ್‌-19ಗೆ ಸಂಬಂಧಿಸಿದಂತೆ ಸದ್ಯ ಎರಡು ರೀತಿಯ ಪರೀಕ್ಷೆಗಳಿವೆ. ಪಾಲಿಮರೇಸ್‌ ಚೈನ್‌ ರಿಯಾಕ್ಷನ್‌ (ಪಿಸಿಆರ್‌) ಪರೀಕ್ಷೆಗಳು ರೋಗಿಯ ಮೂಗು ಮತ್ತು ಗಂಟಲಿನ ದ್ರವದಲ್ಲಿರಬಹುದಾದ ಜೀವಂತ ವೈರಸ್‌ಗಳ ಉಪಸ್ಥಿತಿಯನ್ನು ಸೂಚಿಸಿದರೆ, ರಕ್ತದ್ರವ ಪರೀಕ್ಷೆಗಳು ಸೋಂಕಿಗೆ ರಕ್ತ ಒಳಗಾಗಿರುವ ಹಾಗೂ ವೈರಸ್‌ಗೆ ಅದು ತೋರಿರುವ ಪ್ರತಿರೋಧವನ್ನು ಅದರಲ್ಲಿರುವ ಪ್ರತಿಕಾಯಗಳ (ಆಂಟಿಬಾಡಿ) ಉಪಸ್ಥಿತಿಯನ್ನು ಅಳೆಯುತ್ತವೆ.

ಈಗ ಮೈಕ್ರೊಸಾಫ್ಟ್‌ ಮತ್ತು ಅಡಾಪ್ಟಿವ್‌ ಸಂಸ್ಥೆಗಳು ಮೂರನೇ ರೀತಿಯ ಪರೀಕ್ಷೆಯ ಸಾಧ್ಯತೆ ಕುರಿತು ಭರವಸೆ ಹೊಂದಿವೆ. ಈ ರೀತಿಯ ಪರೀಕ್ಷೆಯು ಸದ್ಯ ಇರುವ ಪರೀಕ್ಷಾ ಸವಾಲುಗಳಿಗೆ ಯಶಸ್ವಿ ಉತ್ತರವಾಗಬಲ್ಲದು ಎನ್ನಲಾಗಿದೆ. ರೋಗಲಕ್ಷಣಗಳನ್ನು ಹೊಂದಿರುವ ಅಥವಾ ಸೋಂಕಿಗೆ ಒಳಗಾಗಿರುವವರು, ಯಾವ ರೀತಿಯ ಪರೀಕ್ಷೆಯನ್ನು ಇಂತಹ ರೋಗಿಗಳ ತಾಳಿಕೊಳ್ಳಬಲ್ಲರು ಎಂಬುದನ್ನು ಇದು ಒಳಗೊಂಡಿದೆ.

ಅಪಾಯದ ಸಾಧ್ಯತೆಯನ್ನು ಆಧರಿಸಿ ಸೂಚಿತ ಚಿಕಿತ್ಸಾ ತಂತ್ರಗಳು ಹಾಗೂ ಜನರ ಮೇಲೆ ಈಗ ನಡೆದಿರುವ ರೋಗನಿರೋಧಕ ಸಮೀಕ್ಷಾ ಪರೀಕ್ಷೆಗಳನ್ನು ಇದು ಒಳಗೊಂಡಿದೆ. ಯಾವ ರೀತಿಯ ನಿರ್ಬಂಧಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಣಯಿಸುವ ಮಾಹಿತಿಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.