ETV Bharat / bharat

ರಾಗಾ ಪೌರತ್ವದ ತಿಕ್ಕಾಟ: ಗೃಹ ಇಲಾಖೆಯಿಂದ ನೋಟಿಸ್​ ಜಾರಿ - undefined

ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಪೌರತ್ವ ಸಂಬಂಧ ಸುಬ್ರಮಣಿಯನ್ ಸ್ವಾಮಿ ದೂರಿಗೆ ಸ್ಪಂಸಿಸಿ ಕೇಂದ್ರದ ಗೃಹ ಸಚಿವಾಲಯವು ಇಂದು ನೋಟೀಸ್​ ಜಾರಿ ಮಾಡಿದೆ.

ರಾಹುಲ್ ಗಾಂಧಿ
author img

By

Published : Apr 30, 2019, 2:08 PM IST

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಪೌರತ್ವಕ್ಕೆ ಸಂಬಂಧಿಸಿದಂತೆ ಕೇಂದ್ರದ ಗೃಹ ಸಚಿವಾಲಯವು ಇಂದು ನೋಟೀಸ್​ ಜಾರಿ ಮಾಡಿದೆ. ಅಲ್ಲದೆ, ನೋಟಿಸ್​ಗೆ ಇನ್ನೆರಡು ವಾರಗಳಲ್ಲಿ ಉತ್ತರಿಸುವಂತೆಯೂ ಸೂಚಿಸಿದೆ.

ರಾಹುಲ್​ ಗಾಂಧಿ ಪೌರತ್ವ ಸಂಬಂಧ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಗೃಹ ಇಲಾಖೆಗೆ ದೂರು ಸಲ್ಲಿಸಿದ್ದರು. ಅದರಂತೆ ಗೃಹ ಇಲಾಖೆ ಇಂದು ನೋಟೀಸ್​ ಜಾರಿಮಾಡಿದೆ.

2003ರಲ್ಲಿ ಇಂಗ್ಲೆಂಡ್​ನಲ್ಲಿ ನೋಂದಣಿಯಾದ ಬ್ಯಾಕೊಪ್ಸ್​ ಕಂಪನಿಯ ನಿರ್ದೇಶಕರಲ್ಲಿ ನೀವೂ ಒಬ್ಬರಾಗಿದ್ದೀರಿ. ಕಂಪನಿಯ ಕಾರ್ಯದರ್ಶಿ ಸಹ ಆಗಿದ್ದೀರಿ. ಕಂಪನಿಯ ವಾರ್ಷಿಕ ವರದಿಯಂತೆ ನಿಮ್ಮ ಜನ್ಮ ದಿನಾಂಕ 19/06/1970 ಆಗಿದ್ದು, ಅಲ್ಲದೆ ಬ್ರಿಟನ್​ನವನು ಎಂದು ನಿಮ್ಮ ರಾಷ್ಟ್ರೀಯತೆಯನ್ನು ಘೋಷಿಸಿಕೊಂಡಿದ್ದೀರಿ. ಇನ್ನೆರಡು ವಾರಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಗೃಹ ಇಲಾಖೆಯ ನೋಟೀಸ್​ನಲ್ಲಿ ಉಲ್ಲೇಖಿಸಲಾಗಿದೆ.

ಅಮೇಠಿಯಲ್ಲಿ ರಾಹುಲ್​ ನಾಮಪತ್ರ ಸಲ್ಲಿಸುವಾಗಲೂ ಪಕ್ಷೇತ್ರರ ಅಭ್ಯರ್ಥಿಗಳು ಪೌರತ್ವ ಹಾಗೂ ಶಿಕ್ಷಣದ ಬಗ್ಗೆ ಪ್ರಶ್ನೆ ಎತ್ತಿದ್ದರು.

Intro:Body:

Rahul 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.