ETV Bharat / bharat

ನಿಷೇಧಿತ ಚಟುವಟಿಕೆಗಳ ಪಟ್ಟಿಯಿಂದ ದೇಶಿಯ ವಿಮಾನ ಸೇವೆಯನ್ನು ಕೈಬಿಟ್ಟ ಗೃಹ ಇಲಾಖೆ

ಕೊರೊನಾ ಲಾಕ್ ಡೌನ್​ ಹಿನ್ನೆಲೆ ಮಾರ್ಚ್ 25 ರಿಂದ ನಿರ್ಬಂಧಿಸಲ್ಪಟ್ಟಿದ್ದ ದೇಶಿಯ ವಿಮಾನ ಸೇವೆಯನ್ನು ನಿಷೇಧಿತ ಚಟುವಟಿಕೆಗಳ ಪಟ್ಟಿಯಂದ ಕೈ ಬಿಡಲಾಗಿದ್ದು, ಇದು ವಿಮಾನಯಾನ ಸೇವೆಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಡಲಿದೆ.

MHA drops domestic air travel from prohibited category, passenger flight ops can resume
ದೇಶಿಯ ವಿಮಾನ ಸೇವೆಗೆ ಗ್ರೀನ್ ಸಿಗ್ನಲ್
author img

By

Published : May 21, 2020, 12:43 PM IST

ನವದೆಹಲಿ : ಲಾಕ್ ಡೌನ್ ಹಿನ್ನೆಲೆ ನಿಷೇಧಿತ ಚಟುವಟಿಕೆಗಳ ಪಟ್ಟಿಯಲ್ಲಿದ್ದ ದೇಶಿಯ ವಿಮಾನಯಾನ ಸೇವೆಯನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಇದು ನಿಯಮಿತ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಅವಕಾಶ ಮಾಡಿಕೊಡಲಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬರುವ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ನಿಷೇಧಿತ ಚಟುವಟಿಕೆಗಳ ಪಟ್ಟಿಯಿಂದ ದೇಶಿಯ ವಿಮಾನ ಸೇವೆಯನ್ನು ಕೈಬಿಟ್ಟು ಆದೇಶ ಹೊರಡಿಸಿದ್ದಾರೆ.

ಎಲ್ಲಾ ರಾಜ್ಯಗಳು, ಕೆಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಲಾಕ್ ಡೌನ್ ಮಾರ್ಗ ಸೂಚಿಯಲ್ಲಿ ಈ ಬಗ್ಗೆ ತಿದ್ದುಪಡಿ ಮಾಡಿಕೊಳ್ಳುವಂತೆ ಅಜಯ್ ಭಲ್ಲಾ ಸೂಚಿಸಿದ್ದಾರೆ. ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಲಾಕ್ ಡೌ್ನ್ ಜಾರಿಗೊಳಿಸಿದ ಹಿನ್ನೆಲೆ ದೇಶಿಯ ವಿಮಾನಗಳ ಹಾರಾಟವನ್ನು ಮಾರ್ಚ್​ 25ರಿಂದ ನಿರ್ಬಂಧಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.