ಲೂಧಿಯಾನ್: ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿರುವ ಪಾಪಿ ತಾಯಿಯೊಬ್ಬಳು ಐದು ವರ್ಷದ ಮಗಳ ಕೊಲೆ ಮಾಡಿರುವ ಘಟನೆ ಪಂಜಾಬ್ನ ಲೂಧಿಯಾನ್ದಲ್ಲಿ ನಡೆದಿದೆ.
ಮಗಳ ದೇಹದಲ್ಲಿ ಬೇರ‍್ಯಾರೋ ಇದ್ದಾರೆಂದು ಶಂಕೆ ವ್ಯಕ್ತ ಪಡಿಸಿ ತಾಯಿ ಈ ರೀತಿಯಾಗಿ ಕೊಲೆ ಮಾಡಿದ್ದಾಳೆಂದು ತಿಳಿದು ಬಂದಿದೆ. ವಲಸೆ ಕಾರ್ಮಿಕರಾಗಿ ಕೆಲಸ ಮಾಡ್ತಿದ್ದ ಕುಟುಂಬ ಸೆಲಂ ಪ್ರದೇಶದಲ್ಲಿ ವಾಸವಾಗಿದ್ದಳು. ಮನೆಯಲ್ಲಿ ಗಂಡ ಇಲ್ಲದ ವೇಳೆ ಈ ಕೃತ್ಯವೆಸಗಿದ್ದಾಳೆ ಎಂದು ಲೂಧಿಯಾನ್ ಎಡಿಸಿಪಿ ದೀಪಕ್ ಪಾರ್ಕೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮಹಿಳೆಯ ಬಂಧನ ಮಾಡಲಾಗಿದ್ದು, ಮೃತ ಬಾಲಕಿಯ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಮಹಿಳೆ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಳು ಎಂದು ತಿಳಿದು ಬಂದಿದೆ.