ಜೈಪುರ: ಮೀಸಲಾತಿ ನೀಡುವಂತೆ ಒತ್ತಾಯಿಸಿ ಗುಜ್ಜರ್ ಸಮುದಾಯ ಮತ್ತೆ ಹೋರಾಟಕ್ಕೆ ಇಳಿದಿದೆ. ಭರತ್ಪುರದಲ್ಲಿ ರೈಲ್ವೆ ಹಳಿ ಬಂದ್ ಮಾಡಿ ಗುಜ್ಜರ್ ಸಮುದಾಯದ ಮುಂಖಂಡರು ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದಾರೆ.
ಈ ಬಾರಿ ನಾವು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧರಿಲ್ಲ. ಅವರು ಕರೆದಲ್ಲಿಗೆ ಹೋಗಲು ನಾವು ಸಿದ್ದರಿಲ್ಲ. ಅವರೇ ನಾವಿದ್ದಲ್ಲಿಗೆ ಅಂದರೆ ರೈಲ್ವೆ ಹಳಿ ಮೇಲೆ ಸಂಪು ಹೂಡಿರುವ ಸ್ಥಳಕ್ಕೆ ಬಂದು ಮಾತುಕತೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.