ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಯಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್, ಎರಡು ದಿನಗಳ ಭಾರತ ಪ್ರವಾಸದ ಸಮಯದಲ್ಲಿ ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
-
Melania Trump to visit Delhi govt school during India visit: Sources
— ANI Digital (@ani_digital) February 20, 2020 " class="align-text-top noRightClick twitterSection" data="
Read @ANI story | https://t.co/FTtt3mEZMJ pic.twitter.com/ciA8SxJLek
">Melania Trump to visit Delhi govt school during India visit: Sources
— ANI Digital (@ani_digital) February 20, 2020
Read @ANI story | https://t.co/FTtt3mEZMJ pic.twitter.com/ciA8SxJLekMelania Trump to visit Delhi govt school during India visit: Sources
— ANI Digital (@ani_digital) February 20, 2020
Read @ANI story | https://t.co/FTtt3mEZMJ pic.twitter.com/ciA8SxJLek
ಫೆಬ್ರವರಿ 24 ರಂದು ಅಮೆರಿಕದ ಅಧ್ಯಕ್ಷರು ಗುಜರಾತ್‌ನ ಅಹಮದಾಬಾದ್ ತಲುಪಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಹ್ಯೂಸ್ಟನ್ನಲ್ಲಿ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು 'ಹೌಡಿ ಮೋದಿ' ಕಾರ್ಯಕ್ರಮ ಪಾಲ್ಗೊಂಡಿದ್ದರು. ಅದೇ ರೀತಿಯಲ್ಲೆ ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಟ್ರಂಪ್ ಮಾತನಾಡಲಿದ್ದಾರೆ.
ಮುಂದಿನ ದಿನ ಅವರು ನವದೆಹಲಿಗೆ ಆಗಮಿಸಲಿದ್ದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಂಗಳವಾರ ಬೆಳಿಗ್ಗೆ ಟ್ರಂಪ್ ಅವರ ಪ್ರೋಟೋಕಾಲ್ ಪ್ರಕಾರ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕವಾಗಿ ಸ್ವಾಗತಿಸಲಾಗುತ್ತದೆ.
ಟ್ರಂಪ್ ಜೊತೆ ಆಗಮಿಸಿರುವ ವಿವಿಧ ಗಣ್ಯರು ನವದೆಹಲಿಯ ಅಮೆರಿಕ ರಾಯಭಾರ ಕಚೇರಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾರತೀಯ ಕಂಪನಿಗಳ ಉನ್ನತಾಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.