ಶ್ರೀನಗರ (ಜಮ್ಮು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ದೇಶದ ಸಂವಿಧಾನದೊಳಗೆ ಪುನಃಸ್ಥಾಪಿಸಲು ಗುಪ್ಕರ್ ಮೈತ್ರಿ ಪ್ರಯತ್ನಿಸುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಪ್ರತಿಪಾದಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೂಲಕ ಕೇಂದ್ರವು ಸಂವಿಧಾನಕ್ಕೆ ಅಗೌರವ ತೋರುತ್ತಿದೆ ಎಂದು ಅವರು ಆರೋಪಿಸಿದರು. ಮೂರು ಕೃಷಿ ಕಾನೂನುಗಳ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅವರು ಟೀಕಿಸಿದ್ದಾರೆ.
"ಕಾನೂನುಗಳನ್ನು ರೈತರು ಅಂಗೀಕರಿಸಿದರೆ, ಅವು ಅವರಿಗೆ ಪ್ರಯೋಜನಕಾರಿಯಾಗಬಲ್ಲವು. ಜನರಿಗೆ ಸ್ವೀಕಾರಾರ್ಹವಲ್ಲದ ಕಾನೂನುಗಳನ್ನು ನೀವು ತಂದರೆ, ನೀವು ದೇಶದ ಸಂವಿಧಾನವನ್ನು ಅಗೌರವಗೊಳಿಸುತ್ತಿದ್ದೀರಿ" ಎಂದು ಅರ್ಥ ಎಂದಿರುವ ಅವರು ಕೇಂದ್ರ ಸರ್ಕಾರದ ಕಾರ್ಯವನ್ನು ಟೀಕಿಸಿದ್ದಾರೆ.