ಶಿಮ್ಲಾ: ಇಡೀ ಭಾರತವೇ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದು, ಇದೇ ವಿಚಾರವಾಗಿ ಅತ್ಯಂತ ಕುತೂಹಲಕಾರಿ ಮಾಹಿತಿಯೊಂದನ್ನ ಇಲ್ಲಿ ಹೇಳುತ್ತಿದ್ದೇವೆ.
ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಕಿನ್ನೌರ್ ಜಿಲ್ಲೆಯ ಕಲ್ಪಾ ಗ್ರಾಮದ ಶ್ಯಾಮ್ ಸರನ್ ನೇಗಿ ಎನ್ನುವ 102 ವರ್ಷದ ವ್ಯಕ್ತಿ 1951ರಿಂದ ಪ್ರತಿಯೊಂದು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದು ಈ ಬಾರಿಯೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.
ಹಿಮಾಚಲ ಪ್ರದೇಶ ರಾಜ್ಯ ಚುನಾವಣಾ ಆಯೋಗ ನೇಗಿಯವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದ್ದು ಈ ಮೂಲಕ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವಂತೆ ಪ್ರೇರಣೆ ನೀಡಲು ಮುಂದಾಗಿದೆ.
Shoutout to India's oldest voter who has voted in every general election since 1951. Guess his name and comment below. Also, tag your friends to participate. #ShoutoutSaturday #UnfoldingIndianElections pic.twitter.com/4CumEDNW97
— MyGovIndia (@mygovindia) March 16, 2019 " class="align-text-top noRightClick twitterSection" data="
">Shoutout to India's oldest voter who has voted in every general election since 1951. Guess his name and comment below. Also, tag your friends to participate. #ShoutoutSaturday #UnfoldingIndianElections pic.twitter.com/4CumEDNW97
— MyGovIndia (@mygovindia) March 16, 2019Shoutout to India's oldest voter who has voted in every general election since 1951. Guess his name and comment below. Also, tag your friends to participate. #ShoutoutSaturday #UnfoldingIndianElections pic.twitter.com/4CumEDNW97
— MyGovIndia (@mygovindia) March 16, 2019
1951ರಲ್ಲಿ ಭಾರತದಲ್ಲಿ ಪ್ರಥಮ ಚುನಾವಣೆ ನಡೆದಾಗ ಚಿನಿ (ಈಗಿನ ಕಿನ್ನೌರ್) ಕ್ಷೇತ್ರದಲ್ಲಿ ಮತ ಚಲಾಯಿಸಿದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಚುನಾವಣೆ ಕುರಿತಂತೆ ಮಾತನಾಡಿದ ನೇಗಿ, " ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಅದರಲ್ಲೂ ಮುಖ್ಯವಾಗಿ ಯುವ ಜನತೆ ಮತದಾನದಲ್ಲಿ ಭಾಗವಹಿಸಿ ಸಮರ್ಥ ಅಭ್ಯರ್ಥಿಯನ್ನು ಆರಿಸಬೇಕು" ಎಂದಿದ್ದಾರೆ.
ಇದೇ ಜುಲೈ 1ರಂದು 103 ವಯಸ್ಸಿಗೆ ಕಾಲಿಡಲಿರುವ ನೇಗಿ 2014ರಲ್ಲಿ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದರು. ಇವರು ಎಂಟು ಮಕ್ಕಳನ್ನು ಹೊಂದಿದ್ದು ಹಿರಿಯ ಮಗ 2002ರಲ್ಲಿ ಅಸುನೀಗಿದ್ದಾನೆ.