ನವದೆಹಲಿ: ಮಹಾರಾಷ್ಟ್ರದ ಕರಾವಳಿ ಜಿಲ್ಲೆ ಪಾಲ್ಘರ್‌ನಲ್ಲಿ ಶುಕ್ರವಾರ 3.5 ತೀವ್ರತೆಯ ಭೂಕಂಪ ಸಂಭವಿಸಿದೆ.
10 ಕಿಲೋಮೀಟರ್ ಆಳದಲ್ಲಿ ಭೂ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಗುಜರಾತ್ ಮತ್ತು ಮುಂಬೈಗೆ ಹೊಂದಿಕೊಂಡಿರುವ ಪಾಲ್ಘರ್ ಜಿಲ್ಲೆಯಲ್ಲಿ ತಾರಾಪುರ ಪರಮಾಣು ವಿದ್ಯುತ್ ಘಟಕಗಳು ಇವೆ. ಕಳೆದ ಕೆಲ ವಾರಗಳಿಂದ ಇಲ್ಲಿ ಕಡಿಮೆ ತೀವ್ರತೆಯ ಭೂಕಂಪಗಳಿಗೆ ಸಂಭವಿಸುತ್ತಲೇ ಇವೆ.