ನವದೆಹಲಿ: ತನ್ನ ಎಲ್ಲ ರೆಸ್ಟೋರೆಂಟ್ಗಳೂ ಹಲಾಲ್ ಪ್ರಮಾಣಪತ್ರ ಪಡೆದಿದೆ ಎಂದು ಮೆಕ್ಡೊನಾಲ್ಡ್ ಅಧಿಕೃತವಾಗಿ ಘೋಷಿಸಿ ಇಕ್ಕಟ್ಟಿಗೆ ಸಿಲುಕಿದೆ.
ಸಂಸ್ಥೆಯ ಅಧಿಕೃತ ಘೋಷಣೆ ವಿರುದ್ಧ ಹಲವರು ಸಿಟ್ಟಿಗೆದ್ದಿದ್ದು, ನಾವು ಇನ್ನು ಮುಂದೆ ನಿಮ್ಮ ರೆಸ್ಟೋರೆಂಟ್ನಲ್ಲಿ ಮಾಂಸಾಹಾರ ಖರೀದಿಸುವುದಿಲ್ಲ ಎಂದು ಸಿಟ್ಟಿನಿಂದ ಟ್ವೀಟ್ ಮಾಡಿದ್ದಾರೆ.
-
All our restaurants have HALAL certificates. You can ask the respective restaurant Managers to show you the certificate for your satisfaction and confirmation. (2/2)
— McDonald's India (@mcdonaldsindia) August 22, 2019 " class="align-text-top noRightClick twitterSection" data="
">All our restaurants have HALAL certificates. You can ask the respective restaurant Managers to show you the certificate for your satisfaction and confirmation. (2/2)
— McDonald's India (@mcdonaldsindia) August 22, 2019All our restaurants have HALAL certificates. You can ask the respective restaurant Managers to show you the certificate for your satisfaction and confirmation. (2/2)
— McDonald's India (@mcdonaldsindia) August 22, 2019
ಅಧಿಕೃತವಾಗಿ ಘೋಷಿಸಿದ್ದಕ್ಕೆ ಧನ್ಯವಾದ ಇನ್ನುಮುಂದೆ ಎಂಸಿಡಿ ಆಹಾರಗಳನ್ನು ಖರೀದಿಸುವುದಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಹಲಾಲ್ ಮಾಂಸ ನಮಗೆ ಬೇಡ ಝಟ್ಕಾ ಮೀಟ್ (ಹಿಂಧೂ ಸಂಪ್ರದಾಯದ ಪ್ರಕಾರನ ಕತ್ತಿಯಲ್ಲಿ ಒಂದೇ ಏಟಿಗೆ ಪ್ರಾಣಿಗಳ ವಧೆ ಮಾಡುವುದು) ಮಾತ್ರ ನಾವು ತಿನ್ನುತ್ತೇವೆ ಎಂದು ಇನ್ನೂ ಕೆಲವರು ಟ್ವೀಟ್ ಮಾಡಿದ್ದಾರೆ.
ಹಲಾಲ್ ಎಂಬುದು ಪ್ರಾಣಿಗಳನ್ನು ವಿಕೃತವಾಗಿ ಕೊಲ್ಲುವ ಒಂದು ವಿಧಾನ ಎಂದು ಇನ್ನೂ ಕೆಲವರು ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ಈ ವಿಷಯ ಟ್ರೆಂಡ್ ಆಗಿದ್ದು, ಕೆಲವರು ವಿರೋಧವಾಗಿ ಮಾತನಾಡಿದರೆ, ಇನ್ನೂ ಕೆಲವರು ಪರವಾಗಿ ಮಾತನಾಡಿದ್ದಾರೆ.
ಈಚೆಗಷ್ಟೇ ಹಿಂಧೂಯೇತರ ಡೆಲಿವರಿ ಬಾಯ್ನಿಂದ ಆಹಾರ ಸ್ವೀಕರಿಸಲು ಗ್ರಾಹಕರಿಗೆ ನಿರಾಕರಿಸಿದ್ದ ಕಾರಣ ಜೊಮೆಟೊ ಹಾಗೂ ಉಬರ್ ಈಟ್ಸ್ ಸಂಸ್ಥೆಯು ಆಹಾರಕ್ಕೆ ಯಾವುದೇ ಧರ್ಮವಿಲ್ಲ. ಆಹಾರವೇ ಒಂದು ಧರ್ಮ ಎಂದು ನೀತಿ ಪಾಠ ಮಾಡಿದ್ದವು.