ಅಗರ್ತಲಾ (ತ್ರಿಪುರಾ): 15ನೇ ವಯಸ್ಸಿನಲ್ಲೇ ಮದುವೆ ಮಾಡಿಕೊಂಡಿದ್ದ ಮಹಿಳೆ ತಾನು ಎದುರಿಸಿದ್ದ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇ.92.6ರಷ್ಟು ಅಂಕ ಪಡೆದುಕೊಂಡಿದ್ದಾರೆ.
ಸದ್ಯ 19 ವರ್ಷದವಳಾಗಿರುವ ಸಂಗಮಿತ್ರಾ ದೇಬ್ಗೆ ಎರಡೂವರೆ ವರ್ಷದ ಮಗನಿದ್ದಾನೆ. ಆದರೂ ಓದುವ ಛಲ ಬಿಡದ ಈಕೆ 12ನೇ ತರಗತಿ ಕಲಾ ವಿಭಾಗದ ಬೋರ್ಡ್ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ತ್ರಿಪುರಾ 12ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಅದರಲ್ಲಿ ಟಾಪ್ 10 ಪಟ್ಟಿಯಲ್ಲಿ ಸಂಗಮಿತ್ರಾ ರಾಜ್ಯಕ್ಕೆ 7ನೇ ಸ್ಥಾನ ದೊರೆತಿದೆ.
ಸಂಗಮಿತ್ರಾ ಪ್ರತಿಕ್ರಿಯಿಸಿ, ಮನೆಯಲ್ಲಿನ ಕೆಲಸ ಮುಗಿಸಿದ ಬಳಿಕ ಮಗುವಿನ ಆರೈಕೆ ಮಾಡುತ್ತಾ ಓದುತ್ತಿದ್ದೆ. ಗಂಡನ ಮನೆಯಲ್ಲೂ ನನಗೆ ಸಹಾಯ ಮಾಡಿದ್ದಾರೆ. ಪರಿಣಾಮ, ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ದೇನೆ ಎಂದಿದ್ದಾರೆ. ಇವರ ಗಂಡ ಬಿಎಸ್ಎಫ್ನಲ್ಲಿದ್ದು, ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
10ನೇ ತರಗತಿಯಲ್ಲಿ ಸಂಗಮಿತ್ರಾ ಶೇ.77ರಷ್ಟು ಅಂಕ ಪಡೆದುಕೊಂಡಿದ್ದರು. ಈ ವೇಳೆ ಆಕೆಗೆ ಮದುವೆ ಮಾಡಿಸಲಾಗಿತ್ತು.