ETV Bharat / bharat

ಮಾವೋವಾದಿಗಳ ಅಕ್ರಮ ಶಸ್ತ್ರಾಸ್ತ್ರ ಉತ್ಪಾದನಾ ಘಟಕ ಸ್ಫೋಟಿಸಿದ ಡಿವಿಎಫ್, ಬಿಎಸ್ಎಫ್ ಸಿಬ್ಬಂದಿ

ಜಿಲ್ಲೆಯ ಕಲಿಮೆಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬ್ ಗ್ರಾಮದ ಬಳಿ ಭದ್ರತಾ ಸಿಬ್ಬಂದಿ ಅಪಾರ ಪ್ರಮಾಣದ ಕಚ್ಚಾ ವಸ್ತುಗಳು ಮತ್ತು ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾವೋವಾದಿಗಳ ಅಕ್ರಮ ಶಸ್ತ್ರಾಸ್ತ್ರ ಉತ್ಪಾದನಾ ಘಟಕ ಸ್ಫೋಟಿ
ಮಾವೋವಾದಿಗಳ ಅಕ್ರಮ ಶಸ್ತ್ರಾಸ್ತ್ರ ಉತ್ಪಾದನಾ ಘಟಕ ಸ್ಫೋಟ
author img

By

Published : Aug 25, 2020, 9:34 AM IST

ಮಲ್ಕಂಗಿರಿ (ಒಡಿಶಾ): ಒಡಿಶಾದ ಮಲ್ಕಂಗಿರಿ ಜಿಲ್ಲೆಯಲ್ಲಿ ಮಾವೋವಾದಿಗಳು ನಡೆಸುತ್ತಿದ್ದ ಅಕ್ರಮ ಶಸ್ತ್ರಾಸ್ತ್ರ ಉತ್ಪಾದನಾ ಘಟಕವನ್ನು ಡಿವಿಎಫ್ ಮತ್ತು ಬಿಎಸ್ಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮೂಲಕ ಸೋಮವಾರ ಸ್ಫೋಟಿಸಿದ್ದಾರೆ.

ಜಿಲ್ಲೆಯ ಕಲಿಮೆಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬ್ ಗ್ರಾಮದ ಬಳಿ ಭದ್ರತಾ ಸಿಬ್ಬಂದಿ ಅಪಾರ ಪ್ರಮಾಣದ ಕಚ್ಚಾ ವಸ್ತುಗಳು ಮತ್ತು ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

"ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ತಯಾರಿಕೆ ಮತ್ತು ದುರಸ್ತಿಗಾಗಿ ಮಾವೋವಾದಿಗಳು ಈ ಅಕ್ರಮ ಘಟಕವನ್ನು ಸ್ಥಾಪಿಸಿದ್ದಾರೆ ಎಂದು ಮಲ್ಕಂಗಿರಿ ಎಸ್ಪಿ ರಿಷಿಕೇಶ್ ಖಿಲಾರಿ ಹೇಳಿದರು.

ಕಾಲಿಮೇಲಾ ಪ್ರದೇಶದಲ್ಲಿ ಸಕ್ರಿಯರಾಗಿದ್ದ ಉಗ್ರಗಾಮಿಗಳು ಬಿಎಸ್‌ಎಫ್ ಸಿಬ್ಬಂದಿ ನಿಯೋಜಿಸಿದ ನಂತರ ಚಿತ್ರಕೊಂಡದ ಆಂತರಿಕ ಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದರು.

ತಂಡವು 48 ಬೋರ್ ಖಾಲಿ ಕಾರ್ಟ್ರಿಡ್ಜ್ ಕ್ಯಾಪ್, ಎರಡು ಬೋರ್ ಲೈವ್ ಮದ್ದುಗುಂಡು, 93 ಡಿಟೋನೇಟರ್, ಎರಡು ಗ್ಯಾಸ್ ಸಿಲಿಂಡರ್, ಲ್ಯಾಥ್ ಮೆಷಿನ್ ಮತ್ತು ಇತರ ಮದ್ದುಗುಂಡುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.

ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಮತ್ತು ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಹಿಂಸಾತ್ಮಕ ಚಟುವಟಿಕೆಯನ್ನು ನಡೆಸಲು ಮಾವೋವಾದಿಗಳು ಈ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.