ಮಣಿಪುರ: ಕೊರೊನಾ ವೈರಸ್ ಲಾಕ್‌ಡೌನ್ ಮಧ್ಯೆ, ಮಣಿಪುರದ ಆರೋಗ್ಯ ಸಚಿವ ಎಲ್. ಜಯಂತಕುಮಾರ್ ಸಿಂಗ್ ಅವರು "ಯುಮ್ಡಾ ಲೀಸಿ + ಹಕ್ಕಂಗ್ ಫಗಥಾನ್ಸಿ" ಅಂದರೆ, ಮನೆಯಲ್ಲೇ ಇರೋಣ, ಆರೋಗ್ಯವಾಗಿರೋಣ ಎಂಬ ಸವಾಲಿನಲ್ಲಿ ಭಾಗವಹಿಸಲು ದೇಶದ ಜನರಿಗೆ ಕರೆ ನೀಡಿದ್ದಾರೆ.
"ಯುಮ್ಡಾ ಲೀಸಿ + ಹಕ್ಕಂಗ್ ಫಗಥನ್ಸಿ " ಸವಾಲಿನಲ್ಲಿ ಜನರು ತಮಗಿಷ್ಟವಾದ ರಚನಾತ್ಮಕ ಚಟುವಟಿಕೆ ಅಂದರೆ, ಯೋಗದಿಂದ ಹಿಡಿದು ನೃತ್ಯ, ಹಾಡುಗಾರಿಕೆ ಅಥವಾ ಯಾವುದೇ ರೀತಿಯ ಮನರಂಜನಾ ಚಟುವಟಿಕೆಯಾಗಿರಬಹುದು ಅದರ 1 ನಿಮಿಷದ ವೀಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬೇಕು. ಜೊತೆಗೆ, ಅದಕ್ಕೆ ಇತರ ಇಬ್ಬರು ವ್ಯಕ್ತಿಗಳನ್ನು ಟ್ಯಾಗ್ ಮಾಡಿ ಎಂದು ತಿಳಿಸಿದ್ದಾರೆ.
ಕೋವಿಡ್-19 ಲಾಕ್‌ಡೌನ್ ಕಾರಣದಿಂದಾಗಿ ಮನೆಯಲ್ಲಿ ಹೆಚ್ಚು ಹೊತ್ತು ಕಳೆಯುವ ಪರಿಸ್ಥಿತಿಯಿದ್ದು ಇದರಿಂದ ಉಂಟಾಗುವ ಆತಂಕ, ಒತ್ತಡವನ್ನು ಕಡಿಮೆ ಮಾಡಲು ಈ ಉಪಾಯ ಮಾಡಲಾಗಿದೆ. ಇನ್ನೂ, ಸಿಂಗ್ ಅವರು ಸ್ವತಃ ತಾವೇ ಯೋಗವನ್ನು ಪ್ರದರ್ಶಿಸಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.