ETV Bharat / bharat

'ಇದು ನಮ್ಮಪ್ಪನ ರಸ್ತೆ' ಎಂದು ನುಗ್ಗಿದ ಯುವಕ... ಮುಂದೇನಾಯ್ತು?

ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ಭೇಟಿಗಾಗಿ ಭದ್ರತೆಯ ದೃಷ್ಟಿಯಿಂದ ಅಳವಡಿಸಿದ್ದ ಬ್ಯಾರಿಕೇಡ್​ ಲೆಕ್ಕಿಸದೇ ಬೈಕ್​ನಲ್ಲಿ ನುಗ್ಗಲು ಯತ್ನಿಸಿದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.

Man tries to breach President Kovind's security in Ranchi
ಸಂಚಾರ ನಿಯಮ ಉಲ್ಲಂಘಿಸಲು ಯತ್ನ
author img

By

Published : Feb 28, 2020, 7:35 PM IST

ರಾಂಚಿ: ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ಅವರು ಮೂರು ದಿನಗಳ ಕಾಲ ಜಾರ್ಖಂಡ್​​ ಭೇಟಿಯಲ್ಲಿದ್ದು, ಭದ್ರತೆಗಾಗಿ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್​ ಅನ್ನು ಲೆಕ್ಕಿಸದೇ ಬೈಕ್​ನಲ್ಲಿ ಬಂದ ಯುವಕನೊಬ್ಬ ನುಗ್ಗಲು ಯತ್ನಿಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ.

ಜಾರ್ಖಂಡ್​ನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿಗಳು ಇಂದು ಭಾಗಿಯಾಗಿದ್ದರು. ರಾಜಭವನದ ಎದುರಿಗೆ ಭದ್ರತೆಯ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೂ ಸಂಚಾರ ನಿಯಮ ಉಲ್ಲಂಘಿಸಲು ಯತ್ನಿಸಿದ ಈ ಯುವಕನನ್ನ ತಕ್ಷಣವೇ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವೇಳೆ ಯುವಕನಿಗೆ ಗಾಯಗಳಾಗಿದ್ದು, ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇನ್ನು ವಿಶೇಷವೆಂದರೆ ಯುವಕನ ಬೈಕ್​ ಹಿಂಭಾಗದಲ್ಲಿ 'ಹೌದು, ಇದು ನಮ್ಮಪ್ಪನ ರಸ್ತೆ' ಎಂದು ಕೂಡ ಬರೆದಿರುವುದು ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.