ನವದೆಹಲಿ: 58 ವರ್ಷದ ವ್ಯಕ್ತಿಯೋರ್ವ ದೆಹಲಿಯ ಪೊಲೀಸ್ ಹೆಡ್ಕ್ವಾರ್ಟರ್ ಹೊರಗೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿರುವ ಘಟನೆ ನಡೆದಿದ್ದು, ಆತನನ್ನ ಇದೀಗ ಪೊಲೀಸರ ವಶಕ್ಕೆ ನೀಡಲಾಗಿದೆ.
58 ವರ್ಷದ ಸಮೀರ್ ಕುಟುಂಬದೊಂದಿಗೆ ಜ್ಯೋತಿ ನಗರದ ಕಾರ್ಡಂಪುರಿ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಿನ್ನೆ ಮಧ್ಯಾಹ್ನ ಪೊಲೀಸ್ ಹೆಡ್ಕ್ವಾರ್ಟರ್ನ ಗೇಟ್ ನಂ.4ರಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ, ಪೊಲೀಸರು ಆತನ ರಕ್ಷಣೆ ಮಾಡಿದ್ದಾರೆ.
ಜ್ಯೋತಿ ನಗರ ಪೊಲೀಸರು ತಾನು ನೀಡಿರುವ ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳದ ಕಾರಣಕ್ಕಾಗಿ ಈ ರೀತಿಯಾಗಿ ತೀರ್ಮಾನ ತೆಗೆದುಕೊಂಡಿದ್ದಾನೆ ಎಂದು ಹೇಳಿದ್ದಾನೆ. ಸದ್ಯ ಆತನನ್ನ ಬಂಧನ ಮಾಡಿರುವುದಾಗಿ ತಿಳಿದು ಬಂದಿದೆ.