ಮುಂಗರ್(ಬಿಹಾರ): ಮಾನಸಿಕ ಖಿನ್ನತೆಗೊಳಗಾಗಿದ್ದ ಮಧ್ಯವಯಸ್ಸಿನ ವ್ಯಕ್ತಿಯೋರ್ವ ತಾಯಿ, ಪತ್ನಿ ಹಾಗು ಮೂವರು ಮಕ್ಕಳ ಕೊಲೆಗೈದು ತದನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಬಿಹಾರದ ಮುಂಗರ್ದಲ್ಲಿ ನಡೆದಿದೆ.
ಕಾವಲುಗಾರನಾಗಿ ಕೆಲಸ ಮಾಡ್ತಿದ್ದ 50 ವರ್ಷದ ಭರತ್ ಕೇಸ್ರಿ, 80 ವರ್ಷದ ತಾಯಿ, ಪತ್ನಿ ಆಶಾ ದೇವಿ(45), ಪುತ್ರಿಯರಾದ ಶಿವಾನಿ ಕುಮಾರಿ(16)ಸಿಮ್ರಾನ್ ಕುಮಾರಿ(14) ಹಾಗೂ ಸೋನಮ್ ಕುಮಾರಿ(10) ಅವರನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.
ಪ್ರಾಥಮಿಕ ತನಿಖೆ ಪ್ರಕಾರ, ಖಿನ್ನತೆಗೆ ಒಳಗಾಗಿ ಆತ ಈ ರೀತಿಯಾಗಿ ನಡೆದುಕೊಂಡಿದ್ದಾನೆ ಎಂದು ತಿಳಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.