ಗಾಜಿಯಾಬಾದ್(ಯುಪಿ): ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೋರ್ವ 19 ವರ್ಷದ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ನೈನಾ ಸಿಂಗ್ ಮೃತ ಯುವತಿ. ಕೊಲೆ ಮಾಡಿರುವ ವ್ಯಕ್ತಿಯನ್ನ ಶೇರ್ ಖಾನ್ ಎಂದು ಗುರುತಿಸಲಾಗಿದೆ. ಜೂನ್ 17ರಂದು ಕೃತ್ಯವೆಸಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಇಂದು ಪೊಲೀಸರು ಯಶಸ್ವಿಯಾಗಿದ್ದಾರೆ.
ಈತನ ವಿಚಾರಣೆ ನಡೆಸಿದಾಗ ಆಕೆಯನ್ನ ಪ್ರೀತಿ ಮಾಡುತ್ತಿದ್ದ ಮಾಹಿತಿ ಹೊರ ಹಾಕಿದ್ದಾನೆ. ಆದರೆ ಯುವತಿ ನಿರಾಕರಿಸಿದ್ದಳಂತೆ. ಈ ಹಿಂದೆ ಕೂಡ ಹಲವು ಬಾರಿ ಕಾಲೇಜ್ನಲ್ಲಿ ಯುವತಿಗೆ ಇದೇ ವಿಷಯವಾಗಿ ಕಿರುಕುಳ ನೀಡಿ, ಯುವತಿ ಕುಟುಂಬಸ್ಥರು ತೊಂದರೆಗೊಳಗಾಗುವಂತೆ ಬೆದರಿಕೆ ಸಹ ಹಾಕಿದ್ದನಂತೆ.
ಜೂನ್ 17ರಂದು ಇಬ್ಬರ ಜೊತೆ ಸೇರಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಳು.