ಲಕ್ನೋ(ಉತ್ತರ ಪ್ರದೇಶ): ತನಗೆ ಹುಟ್ಟುವ ಮಗುವಿನ ಲಿಂಗ ತಿಳಿಯುವ ಉದ್ದೇಶದಿಂದ ಕ್ರೂರಿ ಪತಿಯೊಬ್ಬ ತನ್ನ ಪತ್ನಿಯ ಹೊಟ್ಟೆ ಸೀಳಿರುವ ಘಟನೆ ಉತ್ತರ ಪ್ರದೇಶದ ಬುದಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಟುಂಬಸ್ಥರು ತಿಳಿಸಿರುವ ಪ್ರಕಾರ ಪನ್ನಾ ಲಾಲ್ ಎಂಬ ವ್ಯಕ್ತಿಗೆ ಈಗಾಗಲೇ ಐದು ಹೆಣ್ಣು ಮಕ್ಕಳಿದ್ದು, ಸದ್ಯ ಹುಟ್ಟುವ ಮಗು ಗಂಡಾಗಿರಬೇಕು ಎಂದು ಬಯಸಿದ್ದನು. ಹೀಗಾಗಿ ತನ್ನ 6ನೇ ಮಗುವಿನ ಲಿಂಗ ತಿಳಿಯುವ ಉದ್ದೇಶದಿಂದ ಪತ್ನಿಯ ಹೊಟ್ಟೆ ಸೀಳಿದ್ದಾನೆ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.
ಇದರ ಬಗ್ಗೆ ನೆರೆಹೊರೆಯವರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. ಗಂಡು ಮಗು ಹುಟ್ಟದ ಕಾರಣಕ್ಕಾಗಿ ಈಗಾಗಲೇ ಅನೇಕ ಸಲ ಆತ ಹೆಂಡತಿ ಜತೆ ಜಗಳವಾಡಿದ್ದನು ಎಂದು ವರದಿಯಾಗಿದೆ.