ETV Bharat / bharat

ಫೋನ್​​ನಲ್ಲಿ ಮಾತನಾಡ್ತಿದ್ದ ಹೆಂಡ್ತಿ... ಆಕ್ರೋಶದಲ್ಲಿ ಇಡೀ ಕುಟುಂಬವನ್ನೇ ಕೊಂದ ಗಂಡ! - ಉತ್ತರಪ್ರದೇಶ ಘಾಜಿಯಾಬಾದ್​

ಫೋನ್​​ನಲ್ಲಿ ಹೆಂಡತಿ ಬೇರೆಯವರೊಂದಿಗೆ ಮಾತನಾಡುತ್ತಾಳೆ ಎಂದು ಆಕ್ರೋಶಗೊಂಡ ಗಂಡ ಕುಟುಂಬದ ಎಲ್ಲ ಸದಸ್ಯರ ಕೊಲೆ ಮಾಡಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Feb 28, 2020, 7:14 PM IST

ಘಾಜಿಯಾಬಾದ್( ಉತ್ತರಪ್ರದೇಶ)​​: ಕಟ್ಟಿಕೊಂಡ ಹೆಂಡತಿ ಫೋನ್​​ನಲ್ಲಿ ಮಾತನಾಡುತ್ತಿದ್ದಾಳೆ ಎಂಬ ಕೋಪದಲ್ಲೇ ಗಂಡ ಇಡೀ ಕುಟುಂಬದ ಸದಸ್ಯರನ್ನೇ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​​ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿಬಾಬಾದ್​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವ ಕಾರಣಕ್ಕೆ ಎಲ್ಲರನ್ನು ಕೊಲೆ ಮಾಡಿದ್ದಾನೆ ಎಂಬುದರ ಕುರಿತು ಬರೆದಿರುವ ಸೊಸೈಡ್​ ನೋಟ್​ ಮನೆಯಲ್ಲಿ ಸಿಕ್ಕಿದ್ದು, ಹೆಂಡತಿ, ಇಬ್ಬರು ಮಕ್ಕಳನ್ನ ಕೊಲೆ ಮಾಡಿರುವ ಪಾಪಿ ತದನಂತರ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.

27 ವರ್ಷದ ವ್ಯಕ್ತಿ ಈ ಕೃತ್ಯವೆಸಗಿದ್ದು, ಬೆಳಗಿನ ಜಾವ ಘಟನೆಯ ಬಗ್ಗೆ ಮಾಹಿತಿ ಗೊತ್ತಾಗಿದೆ. ಎರಡು ವರ್ಷದ ಗಂಡು ಮಗು, ನಾಲ್ಕು ವರ್ಷದ ಹೆಣ್ಣು ಮಗಳು ಹಾಗೂ 25 ವರ್ಷದ ಹೆಂಡತಿ ಸಾವನ್ನಪ್ಪಿದ್ದು, ಸೊಸೈಡ್​ ನೋಟ್​​ನಲ್ಲಿ ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂಬುದರ ಕುರಿತು ಬರೆದಿದ್ದಾನೆ.

ಇನ್ನು ಹೆಂಡತಿ ಯಾರೊಂದಿಗೆ ಮಾತನಾಡುತ್ತಿದ್ದಳು ಎಂಬುದಕ್ಕೆ ಸಂಬಂಧಿಸಿದಂತೆ ಗೋಡೆ ಮೇಲೆ ಐದು ನಂಬರ್​ ಬರೆದಿಟ್ಟಿದ್ದಾನೆ. ಸಾವನ್ನಪ್ಪುವುದಕ್ಕೂ ಮುಂಚಿತವಾಗಿ ಇದೇ ವಿಷಯವಾಗಿ ಹೆಂಡತಿಗೆ ಬುದ್ಧಿವಾದ ಹೇಳಿದ್ದರೂ ಆಕೆ ಕೇಳಿರಲಿಲ್ಲ ಎಂದೂ ತಿಳಿಸಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.