ETV Bharat / bharat

ಈತ ಮಾಡಿರುವ ಪಿಕ್‌ಪಾಕೆಟ್‌ ಪ್ರಕರಣಗಳೆಷ್ಟು? ಕಿಸೆಗಳ್ಳನ ಬದುಕು, ಮಕ್ಕಳ ಓದಿನ ಕಥೆ ಕೇಳಿದ್ರೆ ದಂಗಾಗ್ತೀರಾ! - 400 ಪಿಕ್​ಪಾಕೇಟ್​ ಪ್ರಕರಣಗಳ ಆರೋಪಿ

ಸಿಕಂದ್ರಾಬಾದ್​​ ರೈಲ್ವೆ ನಿಲ್ದಾಣದಲ್ಲಿ ಸಿಗರೇಟ್​, ತಂಬಾಕು ಉತ್ಪನ್ನ, ಸಿಹಿ ತಿನಿಸುಗಳನ್ನು ಮಾರಾಟ ಮಾಡುತ್ತಲೇ ಪ್ರಯಾಣಿಕರ ಜೇಬುಗಳಿಗೆ ಕತ್ತರಿ ಹಾಕುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಕಂದ್ರಾಬಾದ್​ ಪೊಲೀಸರು ಬಂಧಿಸಿದ್ದಾರೆ.

Man involved over 400 pick pocketing in Hyderabad

author img

By

Published : Dec 25, 2019, 10:44 AM IST

Updated : Dec 25, 2019, 10:54 AM IST

ಹೈದರಾಬಾದ್​​: ಸಿಕಂದ್ರಾಬಾದ್ ರೈಲ್ವೆ ನಿಲ್ದಾಣದಲ್ಲಿ ಸಿಗರೇಟ್​, ತಂಬಾಕು ಉತ್ಪನ್ನ, ಸಿಹಿ ತಿನಿಸುಗಳನ್ನು ಮಾರಾಟ ಮಾಡುತ್ತಲೇ ಪ್ರಯಾಣಿಕರ ಜೇಬುಗಳಿಗೆ ಕತ್ತರಿ ಹಾಕುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಕಂದ್ರಾಬಾದ್​ ಪೊಲೀಸರು ಬಂಧಿಸಿದ್ದಾರೆ. ಬರೀ ಇಷ್ಟು ಮಾಡಿದ್ದಿದ್ದರೆ ಈತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರಲಿಲ್ಲ ಅನ್ಸುತ್ತೆ. ಆದ್ರೆ, ಆತನ ಮನೆಯ ಬಾಡಿಗೆ, ಐಷಾರಾಮಿ ಜೀವನ, ಮಕ್ಕಳು ಓದುತ್ತಿರುವ ಶಾಲೆ, ಶಾಲಾ ಪ್ರವೇಶ ಶುಲ್ಕ ಕೇಳಿದರೆ ದಂಗಾಗೋದು ಗ್ಯಾರಂಟಿ! ಹೀಗಿದೆ ನೋಡಿ ಈ ಕಳ್ಳನ ಅಸಲಿಯತ್ತು.

ಆತನ ನಾಮದೇಯ ತಾನೇದಾರ್​ ಸಿಂಗ್​​ ಕುಶವ. 2004ರಲ್ಲೇ ಉತ್ತರ ಪ್ರದೇಶದ ಆಲಿಗರ್​ನಿಂದ ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದಿದ್ದ. ಇಲ್ಲಿನ ಸಿಕಂದ್ರಾಬಾದ್​ ರೈಲ್ವೆ ನಿಲ್ದಾಣದಲ್ಲಿ ಸಿಗರೇಟ್​, ತಂಬಾಕು, ಸಿಹಿ ತಿನಿಸುಗಳನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಈ ಎಲ್ಲಾ ಸಾಮಗ್ರಿಗಳನ್ನು ಸ್ನೇಹಿತ ರಾಮ್​ ಸ್ವರೂಪ್​​​ ಒದಗಿಸುತ್ತಿದ್ದ. ಆದರೆ, ಈತ ವ್ಯಾಪಾರದ ಸೋಗಿನಲ್ಲಿ ಮಾಡುತ್ತಿದ್ದದ್ದೇ ಬೇರೆ ಕೆಲಸ.

ಅಂದಿನಿಂದ (2004-2019) ಪ್ರಸ್ತುತ ಆರೋಪಿ ಮೇಲೆ 400 ಪಿಕ್​​ಪಾಕೆಟಿಂಗ್​ ಅಪರಾಧ ಹಾಗೂ ಕಳ್ಳತನ ಪ್ರಕರಣಗಳಿವೆ. ಕಳ್ಳತನ ಮಾಡಿದ ನಗದು, ಕದ್ದ ವಸ್ತುಗಳ ಒಟ್ಟು ಮೌಲ್ಯ ಬರೋಬ್ಬರಿ ₹ 2 ಕೋಟಿಗೂ ಹೆಚ್ಚಿದೆ. ಆದರೂ ಸಾಮಾನ್ಯ ವ್ಯಕ್ತಿಯಂತೆ ನೆಲೆಸಿದ್ದ.

ಹೀಗೆ ಕಳ್ಳತನ ಮಾಡುತ್ತಿದ್ದ:

ಪ್ರಯಾಣಿಕರ ಕಿಸೆಗೆ ಕತ್ತರಿ ಹಾಕಲು ನಿತ್ಯ ಹರಿತವಾದ ಬ್ಲೇಡ್​ಗಳನ್ನು ಹೊಂದಿರುತ್ತಿದ್ದ. ಆತನ ಬಳಿ ಖರೀದಿಸಿದ ಪ್ರಯಾಣಿಕನ ಪರ್ಸ್​​​ನಲ್ಲಿ ಹಣ ಇದ್ದದ್ದನ್ನು ಖಚಿತ ಪಡಿಸಿಕೊಂಡು, ಆತನ ನಿಗಾ ಮೇಲೆ ಇಡುತ್ತಿದ್ದ. ಆ ಪ್ರಯಾಣಿಕರ ಚಲನವನಗಳನ್ನು ಗಮನಿಸಿ ಆತನನ್ನೇ ಅನುಸರಿಸುತ್ತಿದ್ದ. ಬಳಿಕ ಗಮನ ಬೇರೆಡೆ ಸೆಳೆದು ಬ್ಲೇಡ್​ನಿಂದ ಕಿಸೆಗೆ ಕತ್ತರಿ ಹಾಕಿ ಪರಾರಿಯಾಗುತ್ತಿದ್ದ. ಸಿಕಂದ್ರಾಬಾದ್​​-ಪುಣೆ ರೈಲಿನ ಪ್ರಯಾಣಿಕರ ಪರ್ಸ್​​ಗಳನ್ನೇ ಹೆಚ್ಚಾಗಿ ಕದ್ದಿದ್ದಾನೆ ಎಂದು ಸಿಕಂದ್ರಾಬಾದ್ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಬಿ.ಅನುರಾಧಾ ತಿಳಿಸಿದರು.

ಸಿಕಂದ್ರಾಬಾದ್ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಬಿ.ಅನುರಾಧಾ

ಮನೆ ಬಾಡಿಗೆ ಓದಿ: ಇಲ್ಲಿ ಕದ್ದ ಹಣದಲ್ಲಿ ಸ್ವಲ್ಪ ತನ್ನ ತಂದೆಗೆ ಕಳುಹಿಸಿಕೊಡುತ್ತಿದ್ದ. ಜೂಜುಕೋರರನ್ನು ಪರಿಚಯಿಸಿಕೊಂಡು ಅವರೊಂದಿಗೆ ಜೂಜಾಡುತ್ತಿದ್ದ. ಕುಶವ ಮದುವೆ ಆಗುವುದಕ್ಕೂ ಮುನ್ನ 75ಕ್ಕೂ (2009-10ರಲ್ಲಿ) ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಒಟ್ಟು ₹ 13 ಲಕ್ಷ ನಗದು ಸಂಪಾದಿಸಿ, 400 ಚದರ ಗಜಗಳಷ್ಟು ಜಮೀನು ಖರೀದಿಸಿ ಮದುವೆಯಾದ. ಆರೋಪಿ ಮನೆ ಬಾಡಿಗೆ ಬರೋಬ್ಬರಿ ₹ 30,000 ಹಾಗೂ ಇಬ್ಬರನ್ನು ಮಕ್ಕಳನ್ನು ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದಿಸುತ್ತಿದ್ದು, ಈ ಇಬ್ಬರಿಗೂ ವಾರ್ಷಿಕ ₹ 8 ಲಕ್ಷ ಶಾಲಾ ಶುಲ್ಕ ಪಾವತಿಸುತ್ತಾನೆ.

ಇಷ್ಟೆಲ್ಲಾ ಆದ ಬಳಿಕ ಕ್ರಿಕೆಟ್​ ಬೆಟ್ಟಿಂಗ್​ ದಂಧೆಗಿಳಿದ. ಬುಕ್​​ಗಳಿಂದ ₹ 10 ಲಕ್ಷ ಗೆದ್ದ. ಈ ಮೂಲಕ ಆಗ್ರಾದಲ್ಲಿ ಎರಡು ಮಳಿಗೆ, ಎರಡು ಬೆಡ್​ರೂಮ್​ ಒಳಗೊಂಡ ಪ್ಲಾಟ್ಅನ್ನು ಹೆಂಡತಿ ಹೆಸರಲ್ಲಿ​ ಖರೀದಿಸಿದ. ಕಳ್ಳತನ ಪ್ರಕರಣದಲ್ಲೇ 2011ರಲ್ಲಿ ಸೋಲಾಪುರ್​ ರೈಲ್ವೆ ಪೊಲೀಸರು ಬಂಧಿಸಿ, ಒಂದು ವರ್ಷ ಯಾರ್ವಾಡ ಜೈಲಿನಲ್ಲಿರಿಸಿದರು. ಜೈಲಿನಿಂದ ಬಿಡುಗಡೆಯಾದ ನಂತರ, ಅವರು ತಮ್ಮ ಕುಟುಂಬವನ್ನು ಸೆರಿಲಿಂಗಂಪಲ್ಲಿಗೆ ಸ್ಥಳಾಂತರಿಸಿ ಬಾಡಿಗೆ ಮನೆಯಲ್ಲಿದ್ದರು.

ನವೆಂಬರ್​​ನಲ್ಲಿ ಅವರು ಬೇಗಂಪೇಟ್​ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್​ ಪೇದೆಯೊಬ್ಬರ ಮೇಲೆ ಬ್ಲೇಡ್​​ನಿಂದ ಹಲ್ಲೆ ನಡೆಸಿದ್ದರು. ಅಂದು ತಪ್ಪಿಸಿಕೊಂಡಿದ್ದ ಕಳ್ಳ, ಅದೇ ತಿಂಗಳಲ್ಲಿ ತಾನು ನಿಲ್ಲಿಸಿದ್ದ ಬೈಕ್​​ ಸಂಗ್ರಹಿಸಲು ಬಂದಾಗ ರೈಲ್ವೆ ನಿಲ್ದಾಣಕ್ಕೆ ಬಂದಾಗ ಪೊಲೀಸರು ಬಂಧಿಸಿದರು. ಕುಶ್ವಾನಿಂದ 668.09 ಗ್ರಾಂ. ಚಿನ್ನ ಮತ್ತು ₹ 13.53 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮೊದಲು ಮಾಡಿದ್ದ ಕಳ್ಳತನ ಪ್ರಕರಣಗಳು ಮತ್ತು ಆತ ಬದುಕಿದ ಜೀವನದ ರೀತಿಯನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

Intro:Body:

Man involved over 400 pickpocketings in Hyderabad

Railway Police arrested a person involved in more than 400 pickpocketing offences and stole property worth over Rs 2 crore since 2004.

Thanedar Singh Kushva hailing from Aligarh in Uttar Pradesh shifted to Pune in 2004 with the help of his friend Ramaswarup and started selling sweets, cigarettes and tobacco products at railway stations, Secunderabad Railway Superintendent of Police B Anuradha said.

On seeing a few criminals stealing wallets from the passengers, he also decided to commit similar offences. He then started travelling from Secunderabad to Pune to steal wallets. In 2006, he came in contact with an offender and learned techniques of stealing wallets with a blade.

In Vikarabad, Kushva got introduced to gamblers and began spending money on gambling apart from sending some amount to his father.

With a desire to acquire properties in Agra before his marriage, he committed more than 75 offences in 2009 and 2010 and earned Rs 13 lakh in cash. With the stolen property, he purchased 400 square yards of open plot and got married. HE is living a luxury life. His house rent is Rs.30000, and his two children is studying in international school.. paying 4 lacks annum for each one.

He later got came in contact with cricket bookies and earned Rs 10 lakh in cricket betting. With the amount, Kushva purchased two shops in Agra and also a plot on his wife’s name and a two-bedroom house.

In 2011, he was arrested by the Sholapur Railway Police and spent a year in Yerwada jail. After releasing from jail, he shifted his family to Serilingampally and stayed in a rented house.

In November, he attacked a police constable with a blade at Begumpet railway station and though sustaining injuries on his hand, he managed to escape from the spot. He was nabbed on Monday when he came to Begumpet railway station to collect the bike he had parked in November. In all, the police recovered 668.09 grams of gold and Rs 13.53 lakh in cash from Kushva.

Conclusion:
Last Updated : Dec 25, 2019, 10:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.