ETV Bharat / bharat

ಕೊರೊನಾ ಭೀತಿ: ಲೂಡೋ ಗೇಮ್​ ಆಡುವಾಗ ಕೆಮ್ಮಿದ್ದಕ್ಕೆ ಯುವಕನಿಗೆ ಗುಂಡೇಟು! - ಲೂಡೋ ಗೇಮ್​

ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಕೆಮ್ಮಿದ ಪರಿಣಾಮ ಕೊರೊನಾ ಎಂದು ಭಾವಿಸಿ ಆತನ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿರುವ ಘಟನೆ ವರದಿಯಾಗಿದೆ.

Man gets shot at after coughing during ludo game
ಕೊರೊನಾ ಭೀತಿ: ಲೂಡೋ ಆಡುವಾಗ ಕೆಮ್ಮಿದಕ್ಕೆ ಯುವಕನಿಗೆ ಗುಂಡೇಟು..!
author img

By

Published : Apr 15, 2020, 8:41 PM IST

ನೋಯ್ಡಾ/ಉತ್ತರ ಪ್ರದೇಶ: ಕೊರೊನಾ ವೈರಸ್ ದೇಶಾದ್ಯಂತ ಇನ್ನಿಲ್ಲದ ಭೀತಿ ಸೃಷ್ಟಿಸಿದೆ. ಜನರಲ್ಲಿ ಕೊರೊನಾ ಬಗ್ಗೆ ಭೀತಿ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಸಾಮಾನ್ಯ ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡರೂ ಸಹ ಅದು ಕೊರೊನಾ ಎಂಬಂತಾಗಿದೆ. ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಕೆಮ್ಮಿದ ಪರಿಣಾಮ ಆತನಿಗೆ ಕೊರೊನಾ ಇದೆ ಎಂದು ಭಾವಿಸಿ ಅವನ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿರುವ ವಿಚಿತ್ರ ಘಟನೆ ವರದಿಯಾಗಿದೆ.

ಕೊರೊನಾ ಭೀತಿ: ಲೂಡೋ ಆಡುವಾಗ ಕೆಮ್ಮಿದಕ್ಕೆ ಯುವಕನಿಗೆ ಗುಂಡೇಟು!

ನೋಯ್ಡಾದಲ್ಲಿ 25 ವರ್ಷದ ಯುವಕ ಪ್ರಶಾಂತ್​ ಎಂಬಾತನ ಮೇಲೆ ಗುಂಡೇಟು ಗುಂಡು ಹಾರಿಸಲಾಗಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಯತ್ತಿದೆ. ನಾಲ್ವರು ಯುವಕರು ಲೂಡೋ ಗೇಮ್​ ಆಡುವ ವೇಳೆ ಈ ಪ್ರಕರಣ ನಡೆದಿದೆ.

ಇಲ್ಲಿನ ದಯಾನಗರದ ಗ್ರಾಮದ ದೇವಾಸ್ಥಾನವೊಂದರಲ್ಲಿ ಯುವಕರು ಲೂಡೋ ಗೇಮ್ ಆಡುತ್ತಿರುವವಾಗ ಅಲ್ಲಿಗೆ ಗುಲ್ಲು ಎಂಬ ಯುವಕ ಆಗಮಿಸಿದ್ದಾನೆ. ಈ ನಡುವೆ ಪ್ರಶಾಂತ್​ ಕೆಮ್ಮಲು ಆರಂಭಿಸಿದ್ದಾನೆ. ಅವನು ಬೇಕೆಂದೆ ಕೆಮ್ಮುತ್ತಿದ್ದಾನೆ ಎಂದು ಸಿಟ್ಟಿಗೆದ್ದ ಗುಲ್ಲು ಏಕಾಏಕಿ ಪ್ರಶಾಂತ್​ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಅಲ್ಲದೆ ಉಳಿದ ಮೂವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.

ಇವರಿಬ್ಬರೂ ಒಂದೇ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದು, ಮಾತಿಗೆ ಮಾತು ಬೆಳೆದು ಗುಲ್ಲು ಗುಂಡು ಹಾರಿಸಿದ್ದಾನೆ ಅಂತ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬಳಿಕ ಗಾಯಾಳು ಪ್ರಶಾಂತ್​​​ನನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಲ್ಲು ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಪ್ರಕರಣದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.